ಕ್ರೀಡೆ

ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ಮಹಿಳೆಯರ ಅಭಿಯಾನ ಇಂದು ಆರಂಭ

ಬೆಂಗಳೂರು: ಐಪಿಎಲ್​ನ 16 ಆವೃತ್ತಿ ಹಾಗೂ ವುಮೆನ್ಸ್​ ಪ್ರಿಮೀಯರ್​ ಲೀಗ್​ನ (ಡಬ್ಲುಪಿಎಲ್​) ಮೊದಲ ಆವೃತ್ತಿಯಲ್ಲಿ ಅಭಿಮಾನಿಗಳ ನಿರೀೆಗೆ ತಕ್ಕ ಪ್ರದರ್ಶನದೊಂದಿಗೆ ಟ್ರೋಫಿ ಜಯಿಸುವಲ್ಲಿ ವಿಫಲವಾಗಿರುವ ಆರ್​ಸಿಬಿ ತಂಡ ತನ್ನ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಭಾರತ ಮಹಿಳಾ ತಂಡದ ಉಪನಾಯಕಿ ಸ್ಮ$ತಿ ಮಂದನಾ ಸಾರಥ್ಯ ಮಹಿಳಾ ಆರ್​ಸಿಬಿ ತಂಡ ಡಬ್ಲುಪಿಎಲ್​ 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಶನಿವಾರ ಯುಪಿ ವಾರಿಯರ್ಸ್​ ತಂಡವನ್ನು ಎದುರಿಸುವ ಮೂಲಕ ತವರು ಚಿನ್ನಸ್ವಾಮಿ ಅಂಗಣದಲ್ಲಿ ಅಭಿಯಾನ ಆರಂಭಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ.

ಕಳೆದ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಸ್ಮ$ತಿ ಮಂದನಾ ಕೇವಲ 148 ರನ್​ ಮಾತ್ರಗಳಿಸಿದರು. ಆದರೆ ಈ ಬಾರಿ ತವರು ಅಭಿಮಾನಿಗಳ ಎದುರು ಉತ್ತಮ ಪ್ರದರ್ಶನ ನೀಡುವ ಹಂಬಲದಲ್ಲಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ನೀಡಿದ ಪ್ರದರ್ಶನದಿಂದ ಭಾರತ ತಂಡಕ್ಕೆ ಭರವಸೆಯ ಆಲ್ರೌಂಡರ್​ ಎನಿಸಿರುವ ಕರ್ನಾಟಕದ ಶ್ರೇಯಾಂಕಾ ಪಾಟೀಲ್​ ಈ ಬಾರಿಯೂ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಬೌಲಿಂಗ್​ನಲ್ಲಿ ರೇಣುಕಾ ಸಿಂಗ್​ ಜತೆಯಾಗಿ ಕೇಟ್​ ಕ್ರಾಸ್​, ಏಕ್ತಾ ಬಿಷ್ತ್​ ಬಲ ತುಂಬಲಿದ್ದಾರೆ.

ಚೊಚ್ಚಲ ಆವೃತ್ತಿಯಲ್ಲಿ ಎರಡು ತಂಡಗಳು ಅಂಕಪಟ್ಟಿಯ ಕೊನೆಯ ಎರಡು ಸ್ಥಾನ ಪಡೆದುಕೊಂಡಿದ್ದವು. ಯುಪಿ ವಾರಿಯರ್ಸ್​ ಪರ ಪರ ಮಿನಿ ಹರಾಜಿನ ದುಬಾರಿ 2ನೇ ದುಬಾರಿ ಆಟಗಾರ್ತಿ ಕನ್ನಡತಿಯರಾದ ವೃಂದಾ ದಿನೇಶ್​, ರಾಜೇಶ್ವರಿ ಗಾಯಕ್ವಾಡ್​, ದೀಪ್ತಿ ಶರ್ಮ, ನಾಯಕಿ ಅಲಿಸ್ಸಾ ಹೀಲಿ ಪ್ರ್ರಮುಖ ಆಟಗಾರ್ತಿಯರೆನಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್​ 18, ಜಿಯೋ ಸಿನಿಮಾ.