ಕ್ರೀಡೆ

ಆರ್‌ಸಿಬಿಗೆ ಸುಲಭ ತುತ್ತಾದ ಕೆಕೆಆರ್

raghukittur

ಶಾರ್ಜಾ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಮೂರು ವರ್ಷಗಳೇ ಕಳೆದರೂ ಸ್ಫೋಟಕ ಬ್ಯಾಟಿಂಗ್ ಖದರ್ ಇನ್ನೂ ಉಳಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ (73*ರನ್, 33 ಎಸೆತ, 5 ಬೌಂಡರಿ, 6 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರಲ್ಲಿ ಸತತ 2ನೇ ಜಯ ದಾಖಲಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 82 ರನ್‌ಗಳಿಂದ ಸೋಲಿಸಿತು. ಲೀಗ್‌ನಲ್ಲಿ 5ನೇ ಜಯ ದಾಖಲಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 3 ಸ್ಥಾನಕ್ಕೇರಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಎಬಿಡಿ-ಕೊಹ್ಲಿ ಜೋಡಿಯ ಅಬ್ಬರ ಮತ್ತು ಆರಂಭಿಕ ಹಂತದಲ್ಲಿ ಆರನ್ ಫಿಂಚ್ (47 ರನ್, 37 ಎಸೆತ, 4 ಬೌಂಡರಿ, 1 ಸಿಕ್ಸರ್) ಪ್ರದರ್ಶಿಸಿದ ಬಿರುಸಿನ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 194 ರನ್ ಪೇರಿಸಿತು. ಪ್ರತಿಯಾಗಿ 2 ಬಾರಿಯ ಚಾಂಪಿಯನ್ ಕೆಕೆಆರ್ 9 ವಿಕೆಟ್‌ಗೆ 112 ರನ್‌ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ: 2 ವಿಕೆಟ್‌ಗೆ 194 (ಆರನ್ ಫಿಂಚ್ 46, ದೇವದತ್ ಪಡಿಕಲ್ 32, ವಿರಾಟ್ ಕೊಹ್ಲಿ 33*, ಎಬಿ ಡಿವಿಲಿಯರ್ಸ್‌ 73, ಪ್ರಸಿದ್ಧ್ ಕೃಷ್ಣ 42ಕ್ಕೆ 1, ರಸೆಲ್ 51ಕ್ಕೆ 1), ಕೆಕೆಆರ್: 9 ವಿಕೆಟ್‌ಗೆ 112 (ಶುಭಮಾನ್ ಗಿಲ್ 34, ರಸೆಲ್ 16, ತ್ರಿಪಾಠಿ 16, ವಾಷಿಂಗ್ಟನ್ ಸುಂದರ್ 20ಕ್ಕೆ 2, ಕ್ರಿಸ್ ಮಾರಿಸ್ 17ಕ್ಕೆ 2, ನವದೀಪ್ ಸೈನಿ 17ಕ್ಕೆ 1, ಮೊಹಮದ್ ಸಿರಾಜ್ 24ಕ್ಕೆ 1, ಚಾಹಲ್ 12ಕ್ಕೆ 1, ಇಸುರು ಉದಾನ 19ಕ್ಕೆ 1).