ಕ್ರೀಡೆ

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆವರಿಳಿಸಿದ ಕ್ಯಾಪ್ಟನ್​ 'ಫಿಫ್ಟಿ'ದಾರ್! ಎಂಐಗೆ 222 ರನ್ ಬೃಹತ್​​ ಗುರಿ ​| RCB vs MI

RCB vs MI: ಇಂದು (ಏ.07) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್​ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್​ಸಿಬಿಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದೆ.

ಅಂತೆಯೇ ಮೊದಲು ಬ್ಯಾಟ್​ ಮಾಡುತ್ತಿರುವ ಆರ್​ಸಿಬಿಗೆ ಆರಂಭಿಕ ಬ್ಯಾಟರ್​ ಫಿಲ್​ ಸಾಲ್ಟ್ ವಿಕೆಟ್​​ ಶೀಘ್ರವೇ ಪತನಗೊಂಡರೆ, ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ, ಮೈದಾನದ ಸುತ್ತಲ್ಲೇ ಸ್ಫೋಟಕ ಬ್ಯಾಟಿಂಗ್​ ದಾಳಿ ನಡೆಸಿದರು. ಸಾಲ್ಟ್ ಪೆವಿಲಿಯನ್​ನತ್ತ ಮುಖಮಾಡಿದ ಬೆನ್ನಲ್ಲೇ ಕಣಕ್ಕಿಳಿದ ದೇವದತ್ತ ಪಡಿಕ್ಕಲ್​ ಕೂಡ ಸ್ಫೋಟಕ ಇನ್ನಿಂಗ್ಸ್ ಪ್ರಾರಂಭಿಸಿ, ಉತ್ತಮ ಆರಂಭಕ್ಕೆ ಕೊಡುಗೆ ನೀಡಿದರು.

ಇನ್ನು ತಂಡದ ಪರ ಉತ್ತಮ ರನ್​ ಕಲೆಹಾಕುತ್ತಿದ್ದ ಕೊಹ್ಲಿ ಮತ್ತು ಪಡಿಕ್ಕಲ್​ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡ ನಂತರ ಅಖಾಡದಲ್ಲಿ ಅಬ್ಬರಿಸಲು ಪ್ರಾರಂಭಿಸಿದ ರಜತ್ ಪಟಿದಾರ್​, ಬ್ಯಾಟರ್​ ಮಾತ್ರವಲ್ಲದೇ ಕ್ಯಾಪ್ಟನ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ರಜತ್​ ಮತ್ತು ಜಿತೇಶ್​ ಶರ್ಮ ಜತೆಯಾಟ ತಂಡದ

ಆರ್​ಸಿಬಿ ಬ್ಯಾಟಿಂಗ್ ವಿವರ (ಪಸ್ತುತ ವಿವರ)

ಫಿಲ್​ ಸಾಲ್ಟ್​ (4 ರನ್, 2 ಎಸೆತ​)

ವಿರಾಟ್​ ಕೊಹ್ಲಿ (67 ರನ್, 42 ಎಸೆತ​)

ದೇವದತ್ತ ಪಡಿಕ್ಕಲ್​ (37 ರನ್, 22 ಎಸೆತ​)

ಲಿಯಾಮ್ ಲಿವಿಂಗ್​ಸ್ಟೋನ್​ (0 ರನ್​, 2 ಎಸೆತ)

ರಜತ್​ ಪಟಿದಾರ್​ (64 ರನ್​, 32 ಎಸೆತ)

ಜಿತೇಶ್​ ಶರ್ಮ ( 40 ರನ್​, 18 ಎಸೆತ)

ಟಿಮ್​ ಡೇವಿಡ್​ (1 ರನ್​, 1 ಎಸೆತ)