ಕ್ರೀಡೆ

ಮಾರ್ಚ್​ 19ಕ್ಕೆ ಬೆಂಗಳೂರಿನಲ್ಲಿ ಆರ್​ಸಿಬಿ ಅನ್​ಬಾಕ್ಸ್​ ಕಾಯಕ್ರಮ; ಅಭಿಮಾನಿಗಳಿಗೆ ಕಾದಿದೆ ಅಚ್ಚರಿ!

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಆರ್​ಸಿಬಿ ತಂಡ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ. ಕಳೆದೆರಡು ವರ್ಷಗಳಿಂದ "ಆರ್​ಸಿಬಿ ಅನ್​ಬಾಕ್ಸ್​' ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್​ 19ರಂದು ನಿಗದಿಯಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್​ಸಿಬಿ ತಂಡ ತಿಳಿಸಿದೆ.

ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದ ಟಿಕೆಟ್​ ಮಾರಾಟ ಪ್ರಕ್ರಿಯೆ ಶನಿವಾರದಿಂದ ನಡೆಯಲಿದೆ. ಆರ್​ಸಿಬಿ ವೆಬ್​ಸೈಟ್​ ಮತ್ತು ಆ್ಯಪ್​ನಲ್ಲಿ ಟಿಕೆಟ್​ ಮಾರಾಟ ಮಾಡಲಾಗುವುದು.