RCB vs CSK: ಐಪಿಎಲ್ 18ನೇ ಆವೃತ್ತಿಯ ಅತ್ಯಂತ ಕುತೂಹಲಕಾರಿ, ರೋಚಕತೆಗೆ ಸಾಕ್ಷಿಯಾಗುವಂತ ಪಂದ್ಯ ಇಂದು (ಮಾ.28) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಾಡುತ್ತಿದ್ದು, ಟಾಸ್ ಗೆದ್ದು ಸಿಎಸ್ಕೆ ಬೌಲಿಂಗ್ ಆಯ್ದುಕೊಂಡಿದೆ.
ಇದನ್ನೂ ಓದಿ: ಗಡಿ ಸಮಸ್ಯೆಗಳ ಪರಿಶೀಲನೆಗೆ ನೋಡಲ್ ಅಧಿಕಾರಿಗಳ ನೇಮಕ: ಶಾಲಿನಿ ರಜನೀಶ್ | Report submission instruction
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪಡೆ, 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ರಜತ್ ಪಟಿದಾರ್ (51 ರನ್) ಅಬ್ಬರದ ಬ್ಯಾಟಿಂಗ್ ನಡೆಸಿ, ಆಕರ್ಷಕ ಅರ್ಧಶತಕ ಗಳಿಸಿದರೆ, ಫಿಲ್ ಸಾಲ್ಟ್ (32 ರನ್), ಟಿಮ್ ಡೇವಿಡ್ ಮತ್ತು ವಿರಾಟ್ ಕೊಹ್ಲಿ (31 ರನ್) ಕೂಡ ಉತ್ತಮ ರನ್ ಕೊಡುಗೆಯನ್ನು ನೀಡಿದರು.
ಇನ್ನೆರೆಡು ಓವರ್ಗಳಿಂದ ಎನ್ನುವಾಗ ಕಣಕ್ಕಿಳಿದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ಸ್ಯಾಮ್ ಕರನ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳನ್ನು ಸಿಡಿಸಿದರು. ಇದು ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೇದ್ದು ಕುಣಿಯುವಂತೆ ಮಾಡಿತು.