Bengaluru Stampede: ಜೂನ್ 04ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳ ಸಾವು ಪ್ರಕರಣ ದಿನದಿಂದ ದಿನಕ್ಕೆ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಆರ್ಸಿಬಿ ಫ್ರಾಂಚೈಸಿ ಹೈಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: ಹನಿಮೂನ್ ಹತ್ಯೆ ಕೇಸ್ಗೆ ಟ್ವಿಸ್ಟ್ : ಪತಿಯನ್ನು ಕೊಲ್ಲಿಸಿದ್ದೇ ಪತ್ನಿ ಸೋನಮ್! | Indore Couple
ಕಾಲ್ತುಳಿತ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿರುವ ಹಿನ್ನೆಲೆ ಇದೀಗ ಆರ್ಸಿಬಿ ಹೈಕೋರ್ಟ್ ಮೊರೆ ಹೋಗಿದ್ದು, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಡಿಎನ್ಎ ಎಂಟರ್ಟೈನ್ಮೆಂಟ್ ಮತ್ತು ಆರ್ಸಿಬಿ ಫ್ರಾಂಚೈಸಿ ಸದ್ಯ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ದ್ವಾರಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು ಹನ್ನೊಂದು ಅಭಿಮಾನಿಗಳು ಸಾವನ್ನಪ್ಪಿದ್ದು, 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಎ.ಎಸ್. ದಿವ್ಯಾಂಶಿ (13), ದೊರೆಶ (32), ಭೂಮಿಕ್ (20), ಸಹನಾ (25), ಅಕ್ಷತಾ (27), ಮನೋಜ್ (33), ಶ್ರವಣ್ (20), ದೇವಿ (29), ಶಿವಲಿಂಗ (17) ಮತ್ತು ಚಿನ್ಮಯಿ (19) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.