ಐಪಿಎಲ್ 2025 ಕ್ವಾಲಿಫೈಯರ್-1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿತು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರ್‌ಸಿಬಿ ಆಟಗಾರರ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ ಬ್ಯಾಟರ್ಸ್ 14.1 ಓವರ್ನಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಳ್ಳವ ಮೂಲಕ 101 ರನ್ಗಳಷ್ಟೆ ಪೇರಿಸಲು ಸಾಧ್ಯವಾಯಿತು.
ಪ್ರಿಯಾಂಶ್ ಆರ್ಯ (7), ಪ್ರಭಾಸಿಮ್ರಾನ್ ಸಿಂಗ್ (18), ಜೋಶ್ ಇಂಗ್ಲಿಸ್ (4), ಶ್ರೇಯಸ್ ಅಯ್ಯರ್ (2), ನೆಹಾಲ್ ವಧೇರಾ (8), ಶಶಾಂಕ್ ಸಿಂಗ್ (3) ಮುಶೀರ್ ಖಾನ್ (0). ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳಲ್ಲಿ ಜೋಶ್ ಹ್ಯಾಜಲ್ವುಡ್ 3, ಸುಯಶ್ ಶರ್ಮಾ 3, ಯಶಸ್ ದಯಾಳ್ 2, ಭುವನೇಶ್ವರ್ ಕುಮಾರ್ 1, ಮತ್ತು ರೊಮಾರಿಯೊ ಶೆಫರ್ಡ್ 1 ವಿಕೆಟ್ ಪಡೆದರು.
ಸಾಧಾರಣ ಮೊತ್ತ ಬೆನ್ನಟ್ಟಿದ ಆರ್‌ಸಿಬಿ ವಿರಾಟ್ ಕೊಹ್ಲಿ(12), ಸಾಲ್ಟ್(56)ರಜತ್ ಪಾಟೀದಾರ್ (15) ರನ್ ಗಳಿಸುವ ಮೂಲಕ 8 ವಿಕೆಟ್ಗಳ ಜಯ ಸಾಧಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿತು. 2016 ರಲ್ಲಿ ಆರ್‌ಸಿಬಿ ನಾಲ್ಕನೇ ಬಾರಿಗೆ ಫೈನಲ್ ತಲುಪಿತ್ತು.(ಏಜೆನ್ಸೀಸ್)