ಅಬುಧಾಬಿ: ಗೆಲುವು-ಸೋಲಿಗಿಂತ ಪ್ಲೇಆಫ್ ಲೆಕ್ಕಾಚಾರಕ್ಕೆ ಸಾಕ್ಷಿಯಾದ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರು 6 ವಿಕೆಟ್‌ಗಳಿಂದ ಶರಣಾಯಿತು. ಗೆಲುವಿನೊಂದಿಗೆ ಡೆಲ್ಲಿ ತಂಡ 2ನೇ ಸ್ಥಾನಿಯಾಗಿ ಪ್ಲೇಆ್ ಹಂತಕ್ಕೇರಿದರೆ, ಆರ್‌ಸಿಬಿ ಸತತ 4ನೇ ಸೋಲು ಕಂಡರೂ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿತು. ವಿರಾಟ್ ಕೊಹ್ಲಿ ಬಳಗ ಮೂರು ವರ್ಷಗಳ ಬಳಿಕ ಪ್ಲೇಆಫ್ ಗೇರಿದ ಸಾಧನೆ ಮಾಡಿತು. ಸತತ 5 ಸೋಲಿನಿಂದ ಪಾರಾದ ಡೆಲ್ಲಿ ಮೊದಲ ಕ್ವಾಲಿೈಯರ್ ಕದನದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಸನ್ ರೈಸರ್ಸ್ ಅಥವಾ ಕೆಕೆಆರ್ ತಂಡವನ್ನು ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಶುಕ್ರವಾರ ಎದುರಿಸಲಿದೆ.
ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ತನ್ನ 14ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕನ್ನಡಿಗ ದೇವದತ್ ಪಡಿಕಲ್ (50 ರನ್, 41 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ನಡುವೆಯೂ 7 ವಿಕೆಟ್‌ಗೆ 152 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಡೆಲ್ಲಿ ತಂಡ ಆರಂಭಿಕ ಶಿಖರ್ ಧವನ್ (54 ರನ್, 41 ಎಸೆತ, 6 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (60 ರನ್, 46 ಎಸೆತ, 5 ಬೌಂಡರಿ, 1 ಸಿಕ್ಸರ್) 2ನೇ ವಿಕೆಟ್‌ಗೆ 88 ಪೇರಿಸಿದ ಲವಾಗಿ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 154 ರನ್‌ಗಳಿಸಿ ಜಯದ ನಗೆ ಬೀರಿತು. ಡೆಲ್ಲಿ ತಂಡ 17.3 ಓವರ್‌ಗಳಲ್ಲೇ ಚೇಸಿಂಗ್ ಮಾಡಿದ್ದರೆ ಆರ್‌ಸಿಬಿ ರನ್‌ರೇಟ್ ಕೆಕೆಆರ್‌ಗಿಂತ ಕುಸಿತ ಕಾಣುವ ಅಪಾಯವಿತ್ತು. ಆದರೆ 19ನೇ ಓವರ್‌ವರೆಗೂ ಈ ಮೊತ್ತವನ್ನು ರಕ್ಷಿಸಿಕೊಂಡ ಆರ್‌ಸಿಬಿ ಪ್ಲೇಆ್ ಪ್ರವೇಶವನ್ನು ಖಾತ್ರಿಪಡಿಸಿಕೊಂಡಿತು.