ಬೆಂಗಳೂರು: ಆರಂಭಿಕ ಎಸ್‌ಯು ಕಾರ್ತಿಕ್ (71 ರನ್, 44 ಎಸೆತ, 7 ಬೌಂಡರಿ, 3 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ಹಾಗೂ ನಾಯಕ ಕರುಣ್ ನಾಯರ್ (66 ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ಅಮೋಘ ಬ್ಯಾಟಿಂಗ್ ನೆರವಿನಿಂದ ರನ್‌ಮಳೆ ಹರಿಸಿದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಗೆಲುವಿಗೆ ಬೃಹತ್ ಗುರಿ ನೀಡಿದೆ. ಯಾರೇ ಗೆದ್ದರೂ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮೈಸೂರು, ಎಸ್‌ಯು ಕಾರ್ತಿಕ್ ಹಾಗೂ ಕರುಣ್ ನಾಯರ್ ಬಿರುಸಿನ ಜತೆಯಾಟದ ನೆರವಿನಿಂದ 4 ವಿಕೆಟ್‌ಗೆ 207 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಸ್ಲಾಗ್ ಓವರ್‌ಗಳಲ್ಲಿ ಯುವ ಆಲ್ರೌಂಡರ್ ಮನೋಜ್ ಭಾಂಡಗೆ (44* ರನ್, 13 ಎಸೆತ, 2 ಬೌಂಡರಿ, 5 ಸಿಕ್ಸರ್) ತಂಡದ ಮೊತ್ತ ಏರಿಸಿದರು.
ಮೊತ್ತ ಏರಿಸಿದ ಕಾರ್ತಿಕ್-ಕರುಣ್: ಮೈಸೂರು ವಾರಿಯರ್ಸ್ ಆರಂಭ ಉತ್ತಮವಾಗಿರಲಿಲ್ಲ. ಸಿಎ ಕಾರ್ತಿಕ್ (3) ಬೇಗನೆ ನಿರ್ಗಮಿಸಿದರು. ಆಗ ಜತೆಯಾದ ಎಸ್‌ಯು ಕಾರ್ತಿಕ್ ಹಾಗೂ ಕರುಣ್ ತಂಡವನ್ನು ಆಧರಿಸಿ 2ನೇ ವಿಕೆಟ್‌ಗೆ 89 ರನ್ ಕಸಿದರು. ಕಾರ್ತಿಕ್ 30 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಮೊದಲ ಹತ್ತು ಓವರ್‌ಗಳಲ್ಲಿ ಮೈಸೂರು 84 ರನ್‌ಗಳಿಸಿತು. ಕಾರ್ತಿಕ್ ನಿರ್ಗಮನ ಬಳಿಕ ಹರ್ಷಿಲ್ (6) ನಿರಾಸೆ ಮೂಡಿಸಿದರು. 40 ಎಸೆತಗಳ ಅರ್ಧಶತಕದೊಂದಿಗೆ ಕರುಣ್ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದರು. ಬಳಿಕ ಮನೋಜ್ ಭಾಂಡಗೆ ಸ್ಲಾಗ್ ಓವರ್‌ಗಳಲ್ಲಿ ಬೆಂಗಳೂರು ಬೌಲರ್‌ಗಳ ಎದುರು ಅಬ್ಬರಿಸಿದರು. ಅಂತಿಮ ಓವರ್‌ನಲ್ಲಿ 3 ಸಿಕ್ಸರ್ ಸಹಿತ 24 ರನ್ ಬಾರಿಸಿ ಮೊತ್ತವನ್ನು 200ರ ಗಡಿ ದಾಟಿಸಿದರು
ಮೈಸೂರು ವಾರಿಯರ್ಸ್: 4 ವಿಕೆಟ್‌ಗೆ 207 (ಎಸ್‌ಯು ಕಾರ್ತಿಕ್ 71, ಸಿಎ ಕಾರ್ತಿಕ್ 3, ಕರುಣ್ ನಾಯರ್ 66, ಹರ್ಷಿಲ್ 6, ಮನೋಜ್ ಭಾಂಡಗೆ 44*, ಜೆ. ಸುಚಿತ್ 7*, ಜಿ.ನವೀನ್ 44ಕ್ಕೆ 2).