ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 5ರನ್ಗಳ ವಿರೋಚಿತ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕರಾದ ಟ್ರಾವಿಸ್ ಹೆಡ್ (109 ರನ್, 67 ಎಸೆತ, 10 ಬೌಂಡರಿ, 7 ಸಿಕ್ಸರ್), ಡೇವಿಡ್ ವಾರ್ನರ್ (81 ರನ್, 65 ಎಸೆತ, 5 ಬೌಂಡರಿ, 6 ಸಿಕ್ಸರ್) 175ರನ್ಗಳ ಜತೆಯಾಟದ ಫಲವಾಗಿ 49.2 ಓವರ್ಗಳಲ್ಲಿ 388 ರನ್ ಗಳಿಸಿ ಆಲೌಟ್ ಆಯಿತು.
ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 10-0-37-3), ಟ್ರೆಂಟ್ ಬೌಲ್ಟ್ (10-0-77-3), ಮಿಚೆಲ್ ಸ್ಯಾಂಟ್ನರ್ (10-0-80-2), ಮ್ಯಾಟ್ ಹೆನ್ರಿ (6.2-0-67-1), ಜೇಮ್ಸ್ ನೀಶಮ್ (2-0-32-1), ರಚಿನ್ ರವೀಂದ್ರ (8-0-56-0), ಲಾಕಿ ಫರ್ಗ್ಯೂಸನ್ (3-0-38-0) ಎದುರಾಳಿ ತಂಡದ ಮೇಲೆ ಕಡಿವಾಣ ಹೇರಿದ್ದಾರೆ.
389ರನ್ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ರಚಿನ್ ರವೀಂದ್ರ (116 ರನ್, 89 ಎಸೆತ, 9 ಬೌಂಡರಿ, 5 ಸಿಕ್ಸರ್), ಡೆರಿಲ್ ಮಿಚ್ಚೆಲ್ (54 ರನ್, 51 ಎಸೆತ, 6 ಬೌಂಡರಿ, 1 ಸಿಕ್ಸರ್), ಜೇಮ್ಸ್ ನೀಶಮ್ ( 58 ರನ್, 39 ಎಸೆತ, 3 ಬೌಂಡರಿ, 3 ಸಿಕ್ಸರ್) ಫಲವಾಗಿ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 383 ರನ್ಗಳಿಸಿ ಸೋಲೊಪ್ಪಿಕೊಂಡಿತ್ತು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ (10-0-74-3), ಪ್ಯಾಟ್ ಕಮ್ಮಿನ್ಸ್ (10-0-66-2), ಗ್ಲೆನ್ ಮ್ಯಾಕ್ಸ್ವೆಲ್ (10-0-52-1), ಜೋಶ್ ಹೇಜಲ್ವುಡ್ (9-0-70-2), ಮಿಚೆಲ್ ಸ್ಟಾರ್ಕ್ (9-0-89-0), ಮಿಚೆಲ್ ಮಾರ್ಷ್ (2-0-18-0) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.