ಗ್ರಾಸ್ ಐಲೆಟ್: ಟಿ20 ವಿಶ್ವಕಪ್‌ನ ಬಿ ಗುಂಪಿನ 2ನೇ ಸ್ಥಾನಿ ತಂಡವನ್ನು ನಿರ್ಧರಿಸುವ ನಿರ್ಣಾಯಕ ಕಾದಾಟ ಭಾನುವಾರ ನಡೆಯಲಿದ್ದು, ಅಗ್ರಸ್ಥಾನಿ ಆಸ್ಟ್ರೇಲಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಬಿ ಗುಂಪಿನಿಂದ ಆಸ್ಟ್ರೇಲಿಯಾ ಈಗಾಗಲೆ ಸೂಪರ್-8ಗೆ ಅರ್ಹತೆ ಪಡೆದಿದ್ದು, ಇನ್ನೊಂದು ಸ್ಥಾನಕ್ಕೆ ಸ್ಕಾಟ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪಂದ್ಯ ಮಳೆಯಿಂದ ರದ್ದಾದರೂ ಸ್ಕಾಟ್ಲೆಂಡ್ 2ನೇ ಸ್ಥಾನಿಯಾಗಿ ಮುನ್ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನಡೆಯಲಿರುವ ಪಂದ್ಯದಲ್ಲಿ ನಮೀಬಿಯಾ ಎದುರು ಇಂಗ್ಲೆಂಡ್ ಸೋತರೆ ಅಥವಾ ಪಂದ್ಯ ಮಳೆಯಿಂದ ರದ್ದುಗೊಂಡರೆ ಸ್ಕಾಟ್ಲೆಂಡ್‌ಗೆ ಆಸೀಸ್ ವಿರುದ್ಧದ ಪಂದ್ಯ ಔಪಚಾರಿಕ ಎನಿಸಲಿದೆ.
ಸ್ಕಾಟ್ಲೆಂಡ್ (5) ಗುಂಪಿನ ಅಂಕಪಟ್ಟಿಯ 2ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾವನ್ನು ಸೋಲಿಸಿದರೆ ಅಗ್ರಸ್ಥಾನದ ಜತೆಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ. ಆಸ್ಟ್ರೇಲಿಯಾ ತಂಡ ಸತತ 3 ಪಂದ್ಯಗಳನ್ನು ಜಯಿಸಿ ಭರ್ಜರಿ ಾರ್ಮ್‌ನಲ್ಲಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಮಿಚೆಲ್ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಿ ನಥಾನ್ ಎಲ್ಲಿಸ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ. ಸ್ಪಿನ್ನರ್ ಆಡಂ ಜಂಪಾ ಸ್ಕಾಟ್ಲೆಂಡ್ ಬ್ಯಾಟರ್‌ಗಳಿಗೆ ಸವಾಲೆನಿಸಿದ್ದಾರೆ.
ಇಂದಿನ ಪಂದ್ಯಗಳು
ಆಸ್ಟ್ರೇಲಿಯಾ-ಸ್ಕಾಟ್ಲೆಂಡ್
ಗುಂಪು: ಬಿ
ಎಲ್ಲಿ: ಗ್ರಾಸ್ ಐಸ್‌ಲೆಟ್
ಆರಂಭ: ಬೆಳಗ್ಗೆ 6
ಪಾಕಿಸ್ತಾನ-ಐರ್ಲೆಂಡ್
ಗುಂಪು:ಎ
ಎಲ್ಲಿ:ಲೌಡೆರ್‌ಹಿಲ್
ಆರಂಭ: ರಾತ್ರಿ 8