ಬೆಂಗಳೂರು: ಭಾರತದ ಎರಡನೇ ಶ್ರೇಯಾಂಕಿತ ಟೆನಿಸ್ ಆಟಗಾರ ರಾಮ್‌ಕುಮಾರ್ ರಾಮ್‌ನಾಥನ್ ಮಂಗಳವಾರ ಆರಂಭವಾಗಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದಾರೆ. ಇದೊಂದಿಗೆ ಪ್ರದಾನ ಸುತ್ತಿಗೆ ನೇರ ಅರ್ಹತೆ ಪಡೆದ ಮೂರನೇ ಆಟಗಾರ ಎನಿಸಿದ್ದಾರೆ.
ಇತ್ತೀಚೆಗೆ ಡೇವಿಸ್ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧಧ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರಾಮ್ ಕುಮಾರ್, ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಏಳು ಬಾರಿ ೈನಲ್‌ಗೇರಿದ್ದಾರೆ. ವಿಶೇಷ ಎಂದರೆ ರಾಮ್ ಕುಮಾರ್ ತನ್ನ ಏಳನೇ ಹಾಗೂ ಡಬಲ್ಸ್ ಚಾಲೆಂಜರ್ ಪ್ರಶಸ್ತಿಯನ್ನು ಕೊನೆಯದಾಗಿ ಬೆಂಗಳೂರಿನಲ್ಲಿ ಜಯಿಸಿದ್ದರು. ೆ.12 ರಿಂದ 18ರವರೆಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯಲಿದ್ದು, ಡಬಲ್ಸ್‌ನಲ್ಲಿ ಕನ್ನಡಿಗ ಪ್ರಜ್ವಲ್ ದೇವ್-ಸಿದ್ದಾರ್ಥ್ ಭಾಂಥಿಯಾ ಹಾಗೂ ಮನೀಶ್ ಸುರೇಶ್ ಕುಮಾರ್- ಸಾಯಿ ಕಾರ್ತಿಕ್ ರೆಡ್ಡಿ ಜೋಡಿ ಡಬಲ್ಸ್‌ನಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದಾರೆ.