ಕ್ರೀಡೆ

ಹೊಸ ವ್ಯವಹಾರಕ್ಕೆ ಸ್ಟಾರ್​​ ನಟ ಎಂಟ್ರಿ; ISPL ಹೈದರಾಬಾದ್ ತಂಡದ ಮಾಲೀಕ ರಾಮ್ ಚರಣ್

ಹೈದ್ರಾಬಾದ್​: ಸಿನಿಮಾಗಳ ಜತೆಗೆ ಟಾಲಿವುಡ್​​ ನಟ ರಾಮ್ ಚರಣ್ ಕ್ರೀಡೆಗೂ ಕಾಲಿಟ್ಟಿದ್ದಾರೆ.  ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ -T10 ನಲ್ಲಿ ಪಾಲುದಾರನಾಗಿದ್ದಾರೆ. ಹೈದರಾಬಾದ್ ತಂಡವನ್ನು ಖರೀದಿಸಿರುವ ರಾಮ್ ಚರಣ್, ಸ್ಟೋರ್ಟ್ಸ್ ನಲ್ಲೂ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಈಗಾಗಲೇ ತನ್ನ ನಟನೆಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ನಟ ಇದೀಗ ಕ್ರೀಡೆಗೂ ಎಂಟ್ರಿ ಕೊಡುತ್ತಿದ್ದಾರೆ. ಐಎಸ್ ಪಿಎಲ್ ನಲ್ಲಿ 10 ಹೈದರಾಬಾದ್ ತಂಡಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ಐಎಸ್‌ಪಿಎಲ್-ಟಿ10 ಆರು ತಂಡಗಳ ಪೈಕಿ ಶ್ರೀನಗರ- ಅಕ್ಷಯ್ ಕುಮಾರ್, ಬೆಂಗಳೂರು- ಹೃತಿಕ್ ರೋಷನ್, ಮುಂಬೈ- ಅಮಿತಾಬ್ ಬಚ್ಚನ್ ಈಗಾಗಲೇ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ರಾಮ್ ಚರಣ್ ಹೈದರಾಬಾದ್ ತಂಡವನ್ನು  ಖರೀದಿಸಿದ್ದಾರೆ.. ಇನ್ನೂ ಚೆನ್ನೈ ಮತ್ತು ಕೋಲ್ಕತ್ತಾದ ಮಾಲೀಕರು ಯಾರು ಎಂಬುದು ತಿಳಿಯಬೇಕಿದೆ. ಐಎಸ್‌ಪಿಎಲ್‌ನಲ್ಲಿ 10 ಮಾರ್ಚ್ 2 ರಂದು ಪ್ರಾರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಮ್ ಚರಣ್ ತಮ್ಮ ಅಧಿಕೃತ ಎಕ್ಸ್ ಪೇಜ್ ನಲ್ಲಿ ಐಎಸ್ ಪಿಎಲ್ ಸೇರುವ ಕುರಿತು ಘೋಷಣೆ ಮಾಡಿದ್ದಾರೆ.“ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ ಹೈದರಾಬಾದ್ ತಂಡದ ಮಾಲೀಕತ್ವವನ್ನು ಘೋಷಿಸಲು ಉತ್ಸುಕನಾಗಿದ್ದೇನೆ. “ಕ್ರಿಕೆಟ್‌ನ ಹೊರತಾಗಿ, ಈ ಸಾಹಸವು ಪ್ರತಿಭೆಯನ್ನು ಪೋಷಿಸುವುದು, ಸಮುದಾಯ ಮನೋಭಾವವನ್ನು ಬೆಳೆಸುವುದು. ಐಎಸ್‌ಪಿಎಲ್‌ನಲ್ಲಿ ನಾವು ಹೈದರಾಬಾದ್‌ನ ಉಪಸ್ಥಿತಿಯನ್ನು ಹೆಚ್ಚಿಸುವಾಗ, ಸ್ಮರಣೀಯ ಕ್ಷಣಗಳನ್ನು ರಚಿಸುವಾಗ ಮತ್ತು ಉತ್ಸಾಹವನ್ನು ಹೆಚ್ಚಿಸುವಾಗ ನನ್ನೊಂದಿಗೆ ಸೇರಿಕೊಳ್ಳಿ” ಎಂದು ನಟ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಟಿ20ಯಲ್ಲಿ 20 ಓವರ್‌ಗಳಿವೆ. ಆದರೆ ಐಎಸ್‌ಪಿಎಲ್‌10 ನಲ್ಲಿ ಓವರ್‌ಗಳಲ್ಲಿ 10 ಇರುತ್ತದೆ. ಈ ಆಟಗಾರರ ನೋಂದಣಿಯನ್ನು ಸ್ಟ್ರೀಟ್ ಟು ಸ್ಟೇಡಿಯಂ ಎಂಬ ಘೋಷಣೆಯೊಂದಿಗೆ ತೆರೆಯಲಾಯಿತು. ಇನ್ನು ರಾಮ್ ಚರಣ್ ತಂಡದೊಂದಿಗೆ ಆಡುವ ಉತ್ಸಾಹದಲ್ಲಿರುವ ಆಟಗಾರರು ತಡಮಾಡದೆ ನೋಂದಣಿ ಮಾಡಿಕೊಳ್ಳುವುದೊಂದೇ ಬಾಕಿ. ಸಿನಿಮಾ ಹಾಗೂ ಕ್ರೀಡೆ ಎರಡನ್ನೂ ಬ್ಯಾಲೆನ್ಸ್ ಮಾಡಿ ಎಷ್ಟರಮಟ್ಟಿಗೆ ಯಶಸ್ಸು ಗಳಿಸುತ್ತದೋ ಕಾದು ನೋಡಬೇಕು. ಐಎಸ್‌ಪಿಎಲ್ ಮಾರ್ಚ್ 2 ರಿಂದ ಮಾರ್ಚ್ 9 ರವರೆಗೆ ಮುಂಬೈನಲ್ಲಿ ನಡೆಯಲಿದೆ.