ಕ್ರೀಡೆ

ರಾಜೇಂದ್ರ ಬೆಂಗಳೂರು ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್: ಎಫ್‌ಎಂಎಸ್‌ಸಿಐ ಐಎನ್‌ಆರ್‌ಎಸ್‌ಸಿ ದಕ್ಷಿಣ ವಲಯ ಸುತ್ತು ಯಶಸ್ವಿ

ಬೆಂಗಳೂರು: ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್. ಭಾನುವಾರ ನಡೆದ ಎಫ್‌ಎಂಎಸ್‌ಸಿಐ ರೇ ಭಾರತೀಯ ರಾಷ್ಟ್ರಿಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಷಿಪ್ (ಐಎನ್‌ಆರ್‌ಎಸ್‌ಸಿ) ದಕ್ಷಿಣ ವಲಯ ಸುತ್ತಿನಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ನಗರದ ಹೊರವಲಯದಲ್ಲಿರುವ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯ 550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ, 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಮೊದಲ ಸ್ಥಾನ ಪಡೆದರು.

550 ಸಿಸಿ ವರೆಗಿನ ವಿಭಾಗದ ಎ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿ ಯಿಂದ 400ಸಿಸಿ ವರೆಗಿನ ರೇಸ್‌ನಲ್ಲಿ 3ನೇ ಸ್ಥಾನ ಪಡೆದರು.550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಅಂಕಗಳನ್ನು ಕಲೆಹಾಕಿದರು.

ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರೀಹಾನಾ ಪ್ರಶಸ್ತಿ ಎತ್ತಿಹಿಡಿದರು. ಅವರು 8 ನಿಮಿಷ 49.29 ಸೆಕೆಂಡ್‌ಗಳಲ್ಲಿ ರೇಸ್ ಪೂರ್ತಿಗೊಳಿಸಿದರು.

ಫಲಿತಾಂಶಗಳುಮುಕ್ತ ವಿಭಾಗ 550 ಸಿಸಿ ವರೆಗೂ: 1. ರಾಜೇಂದ್ರ. ರ್ (07:33.59) 2. ಸ್ಯಾಮುಯಲ್ ಜೇಕಬ್ 3.ಸಿನಾನ್ ಫ್ರಾನ್ಸಿಸ್ಗುಂಪು ಎ 550 ಸಿಸಿ ವರೆಗೂ: 1. ಸುಹೇಲ್ ಅಹ್ಮದ್(07:51.57), 2. ಸಿನಾನ್ ಫ್ರಾನ್ಸಿಸ್, 3.ಕೌಸ್ತುಭ ಎಂ.ಗುಂಪು ಬಿ 261 ಸಿಸಿ ಯಿಂದ 400 ಸಿಸಿ : 1. ನರೇಶ್ ವಿ.ಎಸ್ (08:09.32), 2.ಅಖಂಡ ಪ್ರತಾಪ್ ಸಿಂಗ್, 3.ಸುಹೇಲ್ ಅಹ್ಮದ್ಗುಂಪು ಸಿ 166 ಸಿಸಿ ಯಿಂದ 260 ಸಿಸಿ: 1. ಸಚಿನ್ ಡಿ (07:51.61 ), 2. ಯೋಗೇಶ್ ಪಿ., 3.ನಿತ್ಯನ್ ಎಲ್.ಗುಂಪು ಡಿ 131 ಸಿಸಿ ಯಿಂದ 165 ಸಿಸಿ: 1.ವರುಣ್ ಕುಮಾರ್(08:12.09), 2. ಅಬ್ರಾರ್ ಪಾಷಾ, 3.ಭರತ್ ಎಲ್.ಬುಲೆಟ್ ಕ್ಲಾಸ್: 1.ನರೇಶ್ ವಿ.ಎಸ್.(08:03.35), 2.ಸುಹೇಲ್ ಅಹ್ಮದ್, 3.ಅಸಾದ್ ಖಾನ್ಸ್ಕೂಟರ್ ಕ್ಲಾಸ್: 1. ಸುಬ್ರಮಣ್ಯ(08:39.07), 2. ಪಿಂಕೇಶ್ ಥಾಕ್ಕರ್, 3.ಕಾರ್ತಿಕ್ ನಾಯ್ಡುಮಹಿಳೆಯರ ವಿಭಾಗ 260 ಸಿಸಿ ವರೆಗೂ: 1. ರೀಹಾನಾ (08:49.29), 2.ಸ್ನೇಹಾ ಸಿ.ಸಿ, 3.ಶತಾಬ್ದಿ ಸಮಂತಾವಲಯ ಸ್ಟಾರ್: 1.ಯೋಗೇಶ್ ಪಿ.(07:53.90), 2.ಸಂಜಯ್ ಸೋಮಶೇಖರ್, 3.ವಿನಯ್ ಪ್ರಸಾದ್.