ದುಬೈ: ದೇವದತ್ ಪಡಿಕ್ಕಲ್ (35) ಮತ್ತು ನಾಯಕ ವಿರಾಟ್ ಕೊಹ್ಲಿ (43) ಅದ್ಬುತ ಜತೆಯಾಟ ಹಾಗೂ ಎ.ಬಿ. ಡಿವಿಲಿಯರ್ಸ್ (55*) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಅಮೋಘ ಜಯಸಾಧಿಸಿತು.
ಶನಿವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 33ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 178 ರನ್ ಗುರಿ ಬೆನ್ನತ್ತಿದ ಆರ್ಸಿಬಿ 19.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 179 ರನ್ ಕೆಲೆಹಾಕುವ ಮೂಲಕ ಗೆಲುವಿನ ನಗೆ ಬೀರಿತು.
ಆ್ಯರನ್ ಫಿಂಚ್ (14) ಆರಂಭಿಕ ಆಘಾತದ ಹೊರತಾಗಿಯೂ ತಂಡದ ಪರ ಪಡಿಕ್ಕಲ್ (35) ಮತ್ತು ಕೊಹ್ಲಿ (43) ಉತ್ತಮ ಬುನಾದಿ ಹಾಕಿಕೊಟ್ಟರು. ಕೊನೆಯಲ್ಲಿ ಅಬ್ಬರಿಸಿದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ 1 ಬೌಂಡರಿ ನೆರವಿನಿಂದ ಅಜೇಯ 55 ರನ್ ಗಳಿಸಿದರು. ಈ ಮೂಲಕ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಗುರುಕಿರತ್ ಮನ್ ಸಿಂಗ್ (19) ರನ್ ಗಳಿಸಿ ಅಜೇಯ ರಾಗಿ ಉಳಿದರು.
ರಾಜಸ್ಥಾನ ರಾಯಲ್ಸ್: 6 ವಿಕೆಟ್ಗೆ 177 (ಸ್ಟೀವನ್ ಸ್ಮಿತ್ 57, ರಾಬಿನ್ ಉತ್ತಪ್ಪ 41, ಜಾಸ್ ಬಟ್ಲರ್ 24, ಶ್ರೇಯಸ್ ಗೋಪಾಲ್ 32ಕ್ಕೆ 1, ಕಾರ್ತಿಕ್ ತ್ಯಾಗಿ 32ಕ್ಕೆ 1, ರಾಹುಲ್ ತೆಹವಾಟಿಯಾ 30ಕ್ಕೆ 1
ಆರ್ಸಿಬಿ: 3 ವಿಕೆಟ್ಗೆ 179 (ಎಬಿ ಡಿವಿಲಿಯರ್ಸ್ ಅಜೇಯ 55, ವಿರಾಟ್ ಕೊಹ್ಲಿ 43, ಪಡ್ಡಿಕ್ಕಲ್ 35, ಕ್ರಿಸ್ ಮೊರೀಸ್ 26ಕ್ಕೆ 4, ಚಹಾಲ್ 34ಕ್ಕೆ 2)