ಕ್ರೀಡೆ

ಪಂಜಾಬ್ ಕಿಂಗ್ಸ್-ರಾಜಸ್ಥಾನ ರಾಯಲ್ಸ್ ಮುಖಾಮುಖಿ: ಅಜೇಯ ಓಟದ ನಿರೀಕ್ಷೆಯಲ್ಲಿ ಶ್ರೇಯಸ್ ಬಳಗ

ಮುಲ್ಲನ್‌ಪುರ: ಟೂರ್ನಿಯಲ್ಲಿ ಅಜೇಯ ತಂಡ ಎನಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ಹಾಗೂ ಕಳೆದ ಪಂದ್ಯದಲ್ಲಷ್ಟೇ ಗೆಲುವಿನ ಹಳಿ ಏರಿರುವ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಶನಿವಾರ ಮುಖಾಮುಖಿ ಆಗಲಿವೆ. ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗ ಹ್ಯಾಟ್ರಿಕ್ ಜಯದ ಹಂಬಲದಲ್ಲಿದ್ದು, ಕಾಯಂ ನಾಯಕ ಸಂಜು ಸ್ಯಾಮ್ಸನ್ ಪೂರ್ಣ ಫಿಟ್ನೆಸ್‌ನೊಂದಿಗೆ ಪುನಃ ರಾಜಸ್ಥಾನ ತಂಡದ ಸಾರಥ್ಯ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ಸತತ 2 ಸೋಲಿನ ಬಳಿಕ ಹಿಂದಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಮಣಿಸಿರುವ ರಾಜಸ್ಥಾನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಜತೆಗೆ ಆರಂಭಿಕ 2 ಪಂದ್ಯಗಳಲ್ಲಿ ಕೇವಲ ಆಟಗಾರನಾಗಿ ಆಡಿದ್ದ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್ ಆಗಿರುವುದು ಪ್ಲಸ್ ಪಾಯಿಂಟ್. ಬಿಸಿಸಿಐನ ಶ್ರೇಷ್ಠತಾ ಕೇಂದ್ರದಿಂದ ಗ್ರೀನ್ ಸಿಗ್ನಲ್ ಪಡೆದಿರುವ ಸ್ಯಾಮ್ಸನ್, ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಭರ್ಜರಿ ಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತವರಿನಾಚೆಗೆ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡಿದ್ದು, ತವರಿನಲ್ಲೂ ಅಜೇಯ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಶ್ರೇಯಸ್ ಅಯ್ಯರ್ ಹಾಗೂ ಕೋಚ್ ರಿಕಿ ಪಾಂಟಿಂಗ್ ಜೋಡಿ ಪಂಜಾಬ್‌ಗೆ ಹೊಸ ಸ್ಪರ್ಶ ನೀಡಿದ್ದು, 17 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ನಿರೀಕ್ಷೆ ಹರಡಿದೆ.

ಜೈಸ್ವಾಲ್ ರನ್‌ಬರ!: ಟೀಮ್ ಇಂಡಿಯಾ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಲಿ ಆವೃತ್ತಿಯಲ್ಲಿ ರನ್‌ಬರ ಎದುರಿಸುತ್ತಿರುವುದು ರಾಜಸ್ಥಾನ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ತೊರೆಯುತ್ತಿರುವ ಜೈಸ್ವಾಲ್ ನಾಯಕತ್ವದ ಮೇಲೆ ಗಮನಹರಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಸ್ಯಾಮ್ಸನ್ ಗೈರಿನಲ್ಲಿ ಅಸ್ಸಾಂ ರಿಯಾನ್ ಪರಾಗ್‌ಗೆ ರಾಜಸ್ಥಾನ ನಾಯಕತ್ವ ನೀಡಿದ್ದು, ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೈಸ್ವಾಲ್, ಪರಾಗ್‌ಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಜೈಸ್ವಾಲ್ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 1,29 ಹಾಗೂ 4 ರನ್ ಮಾತ್ರಗಳಿಸಿದ್ದಾರೆ. ರಾಜಸ್ಥಾನ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಜೈಸ್ವಾಲ್ ನಿರ್ಣಾಯಕ ಎನಿಸಲಿದ್ದಾರೆ. ಜತೆಗೆ ೆಬ್ರವರಿ ಬಳಿಕ ಒಂದು ಪಂದ್ಯವನ್ನಾಡದಿರುವುದು ಜೈಸ್ವಾಲ್ ರನ್‌ಬರಕ್ಕೆ ಕಾರಣ ಎನ್ನಲಾಗಿದೆ.

ಪಂಜಾಬ್‌ಗೆ ಶ್ರೇಯಸ್ ಬಲ: ಹಾಲಿ ವರ್ಷ ಶ್ರೇಯಸ್ ಅಯ್ಯರ್ ಭರ್ಜರಿ ಾರ್ಮ್‌ನಲ್ಲಿರುವುದು ಪಂಜಾಬ್‌ಗೆ ಹೆಚ್ಚಿನ ನೀಡಿದೆ. ಜತೆಗೆ ನಾಯಕತ್ವದಲ್ಲೂ ಹೆಚ್ಚು ಪಕ್ವಗೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿ 16 ಪಂದ್ಯಗಳಲ್ಲಿ 13 ಸಿಕ್ಸರ್ ಸಿಡಿಸಿದ್ದ ಶ್ರೇಯಸ್, ಈ ಬಾರಿ ಕೇವಲ 2 ಪಂದ್ಯಗಳಲ್ಲಿ ಈ ದಾಖಲೆ ಸರಿಗಟ್ಟಿದ್ದಾರೆ. ಐಪಿಎಲ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಶ್ರೇಯಸ್, 2026ರ ಟಿ20 ವಿಶ್ವಕಪ್ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾರೆ. ಆರಂಭಿಕ ಪ್ರಭ್ ಸಿಮ್ರನ್ ಸಿಂಗ್ ಸಹ ಾರ್ಮ್‌ಗೆ ಮರಳಿರುವುದು ಪಂಜಾಬ್‌ಗೆ ಶಕ್ತಿ ನೀಡಿದೆ. ಮ್ಯಾಕ್ಸ್‌ವೆಲ್, ಸ್ಟೋಯಿನಿಸ್, ಶಶಾಂಕ್ ಸಿಂಗ್ ಒಳಗೊಂಡ ಮಧ್ಯಕ್ರಮಾಂಕ್ಕೆ ನೈಜ ಪರೀಕ್ಷೆ ಎದುರಾಗಿಲ್ಲ. ಹಿಂದಿನ ಪಂದ್ಯದಲ್ಲಿ ಲಯಕ್ಕೆ ಮರಳಿರುವ ಜ್ರೋಾ ಆರ್ಚರ್, ಸಂದೀಪ್ ಶರ್ಮಗೆ ಪಂಜಾಬ್ ಬ್ಯಾಟರ್‌ಗಳು ಸವಾಲೊಡ್ಡಬಹುದು.

ಮುಖಾಮುಖಿ: 28

ಪಂಜಾಬ್: 12

ರಾಜಸ್ಥಾನ: 16

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್