Rajasthan Royals CEO: ಐಪಿಎಲ್ 2025 ರ ಋತುವಿನಲ್ಲಿ ಉತ್ತಮ ಆರಂಭ ಪಡೆದ ರಾಜಸ್ಥಾನ ರಾಯಲ್ಸ್ ತಂಡ ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ ನಡೆದ 42 ನೇ ಪಂದ್ಯದಲ್ಲಿ ರಾಯಲ್ಸ್ ತಂಡವು ಆರ್‌ಸಿಬಿ ವಿರುದ್ಧ 11 ರನ್‌ಗಳಿಂದ ಸೋತಿತು. ತಂಡದ ಸಿಇಒ ಜೇಕ್ ಲಶ್-ಮೆಕ್‌ಕ್ರಮ್ ಬೆಂಗಳೂರಿನ ಜನಪ್ರಿಯ ಮದ್ಯದಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನ್ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇದು ಈ ಋತುವಿನಲ್ಲಿ ಅವರ ಆರನೇ ಗೆಲುವಾಗಿದೆ. ಅತ್ತ ರಾಜಸ್ಥಾನ್ ಆಡಿದ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದು ಏಳರಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ, ಬಹುತೇಕ ಪ್ಲೇ ಆಫ್ನಿಂದ ಹೊರಬಿದ್ದಿದೆ. ಆರ್‌ಸಿಬಿ ವಿರುದ್ಧ ಗೆದ್ದಿದ್ದರೆ ಆರ್ಆರ್ ತಂಡಕ್ಕೆ ಪ್ಲೇ ಆಫ್ಗೇರುವ ಕನಸು ಚೂರಾದರು ಇರುತ್ತಿತ್ತು. ಆದರೀಗ ಆ ಆಸೆ ಕೂಡ ನುಚ್ಚುನೂರಾಗಿದೆ.
ಈ ಆಘಾತಕಾರಿ ಸೋಲಿನ ನಂತರ, ತಂಡದ ಸಿಇಒ ಜೇಕ್ ಲಶ್-ಮೆಕ್‌ಕ್ರಮ್ ಬೆಂಗಳೂರಿನ ಜನಪ್ರಿಯ ಮದ್ಯದಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.
ತಂಡದ ಸೋಲಿನ ಬೆನ್ನಲ್ಲೇ ರಾಜಸ್ಥಾನದ ಸಿಇಒ ಮೆಕ್ರಮ್ ಚಿನ್ನಸ್ವಾಮಿ ಸ್ಟೇಡಿಯಂನ ಪಕ್ಕದಲ್ಲೇ ಇರುವ ಮದ್ಯದಂಗಡಿ ‘ಟಾನಿಕ್’ ಕಡೆಗೆ ಹೋಗಿದ್ದಾರೆ. ಅಭಿಮಾನಿಯೊಬ್ಬರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ತಂಡದ ಮೇಲಿನ ಒತ್ತಡವನ್ನು ತೋರಿಸುತ್ತದೆ.
ರಾಜಸ್ಥಾನ್ ರಾಯಲ್ಸ್ ತಂಡ ಇದುವರೆಗೆ ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇಂದಿನಿಂದ ಪ್ರತಿಯೊಂದು ಪಂದ್ಯವೂ ಅವರಿಗೆ ಗೆಲ್ಲಲೇಬೇಕಾದ ಪಂದ್ಯವಾಯಿತು. ಅವರು ಏಪ್ರಿಲ್ 28 ರಂದು ತಮ್ಮ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದ್ದಾರೆ. ಈ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಂದಿನ ಪಂದ್ಯವನ್ನು ಗೆದ್ದು ಮತ್ತೆ ಪುಟಿದೇಳುವ ಅಗತ್ಯ ರಾಜಸ್ಥಾನ ರಾಯಲ್ಸ್‌ಗೆ ತೀವ್ರವಾಗಿದೆ.