ಕ್ರೀಡೆ

ಕ್ರಿಸ್ ಮಾರಿಸ್ ಮಾರಕ ದಾಳಿಗೆ ಕುಸಿದ ಕೆಕೆಆರ್; ರಾಜಸ್ಥಾನ ರಾಯಲ್ಸ್‌ಗೆ 6 ವಿಕೆಟ್ ಜಯ

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರ ತನ್ನ 5ನೇ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಇದರಿಂದ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾದ ಸಂಜು ಸ್ಯಾಮ್ಸನ್ ಬಳಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ಸತತ 4ನೇ ಸೋಲು ಕಂಡ ಕೆಕೆಆರ್ ಕಡೇ ಸ್ಥಾನಕ್ಕೆ ಕುಸಿತ ಕಂಡಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಕ್ರಿಸ್ ಮಾರಿಸ್ (23ಕ್ಕೆ 4) ಮಾರಕ ದಾಳಿಗೆ ನಲುಗಿ 9 ವಿಕೆಟ್‌ಗೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಈ ಸುಲಭ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ, ನಾಯಕ ಸಂಜು ಸ್ಯಾಮ್ಸನ್ (42*ರನ್, 41 ಎಸೆತ, 2 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 134 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಕೋಲ್ಕತ ನೈಟ್ ರೈಡರ್ಸ್‌: 9 ವಿಕೆಟ್‌ಗೆ 133 (ನಿತೀಶ್ ರಾಣಾ 22, ರಾಹುಲ್ ತ್ರಿಪಾಠಿ 36, ದಿನೇಶ್ ಕಾರ್ತಿಕ್ 25, ಜೈದೇವ್ ಉನಾದ್ಕತ್ 25ಕ್ಕೆ 1, ಕ್ರಿಸ್ ಮಾರಿಸ್ 23ಕ್ಕೆ 4, ಚೇತನ್ ಸಕಾರಿಯ 31ಕ್ಕೆ 1, ಮುಸ್ತಾಫಿಜರ್ ರೆಹಮಾನ್ 22ಕ್ಕೆ 1), ರಾಜಸ್ಥಾನ ರಾಯಲ್ಸ್: 18.5 ಓವರ್‌ಗಳಲ್ಲಿ 134 (ಸಂಜು ಸ್ಯಾಮ್ಸನ್ 42*, ಶಿವಂ ದುಬೆ 22, ಯಶಸ್ವಿ ಜೈಸ್ವಾಲ್ 22, ಡೇವಿಡ್ ಮಿಲ್ಲರ್ 24*, ವರುಣ್ ಚಕ್ರವರ್ತಿ 32ಕ್ಕೆ 2, ಶಿವಂ ಮಾವಿ 19ಕ್ಕೆ 1, ಪ್ರಸಿದ್ಧ ಕೃಷ್ಣ 20ಕ್ಕೆ 1).