ಕೋಲ್ಕತ: ಹಿಂದಿನ ಪಂದ್ಯದ ಗೆಲುವಿನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಪ್ಲೇಆಫ್ಗೇರುವ ಆಸೆ ಜೀವಂತವಿರಿಸಿಕೊಂಡಿದೆ. ಭಾನುವಾರ ಈಡನ್ ಗಾರ್ಡನ್ನಲ್ಲಿ ರಾಜಸ್ಥಾನ ರಾಯಲ್ಸ್ ಸವಾಲು ಎದುರಿಸಲಿದ್ದು, ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ತವಕದಲ್ಲಿದೆ. ರಾಜಸ್ಥಾನಕ್ಕೆ ಔಪಚಾರಿಕ ಎನಿಸಿದರೂ, ಪ್ರತಿಷ್ಠೆಗಾಗಿ ಸೆಣಸಲಿದೆ.
ತವರಿನ ನೆಲದಲ್ಲಿ ಲಯ ಕಂಡುಕೊಂಡಿರುವ ಕೆಕೆಆರ್ ಟೂರ್ನಿಯಲ್ಲಿ ತನ್ನ 4 ಲೀಗ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ 17 ಅಂಕ ಕಲೆಹಾಕಲಿದೆ. ಜತೆಗೆ ಇತರ ಪಂದ್ಯಗಳ ಲಿತಾಂಶದ ಮೇಲೆ ಪ್ಲೇಆಫ್ ಸ್ಥಾನ ನಿರ್ಧರಿತವಾಗಲಿದೆ. ಆದರೆ 4ರಲ್ಲಿ 2 ಪಂದ್ಯಗಳನ್ನು ಕೋಲ್ಕತದಲ್ಲಿ ಆಡಲಿದೆ. ಇದುವರೆಗೆ ಅಡಿರುವ 10 ಪಂದ್ಯಗಳಲ್ಲಿ 4 ಜಯ, 5 ಸೋಲು ಮತ್ತು 1 ರದ್ದು ಸೇರಿ 9 ಅಂಕ ಹೊಂದಿದೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಎದುರಿನ ಗೆಲುವು ತಂಡದಲ್ಲಿ ಹೊಸ ಹುಮ್ಮಸ್ಸು ತುಂಬಿದೆ.
ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ಹೊಂದಿರುವ ರಾಜಸ್ಥಾನ ಎದುರು ಕೆಕೆಆರ್ ೇವರಿಟ್ ಎನಿಸಿದೆ. ಮುಂಬೈ ವಿರುದ್ಧ ಬರೋಬ್ಬರಿ 100 ರನ್ಗಳಿಂದ ಮುಗ್ಗರಿಸಿದ ರಾಜಸ್ಥಾನ ರಾಯಲ್ಸ್, ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8 ಸೋಲು ಕಂಡಿದೆ. ರಾಜಸ್ಥಾನ ಒತ್ತಡ ರಹಿತವಾಗಿ ಆಡುವುದರಿಂದ ಇತರ ತಂಡಗಳು ಪ್ಲೇಆ್ಗೇರುವ ಅವಕಾಶಕ್ಕೆ ತಡೆಯಾದರೂ ಅಚ್ಚರಿ ಇಲ್ಲ. ಕಾಯಂ ನಾಯಕ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವುದು ಖಾತ್ರಿಗೊಂಡಿಲ್ಲ. ರಿಯಾನ್ ಪರಾಗ್ ಹಂಗಾಮಿಯಾಗಿ ತಂಡ ಮುನ್ನಡೆಸುವ ಸಾಧ್ಯತೆಗಳಿವೆ. ಜತೆಗೆ ವೇಗಿ ಸಂದೀಪ್ ಶರ್ಮ ಸಹ ಗಾಯದ ಸಮಸ್ಯೆಯಿಂದ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದು, ರಾಜಸ್ಥಾನಕ್ಕೆ ಮತ್ತಷ್ಟು ಪೆಟ್ಟು ನೀಡಿದೆ. ಮೆಗಾ ಹರಾಜಿಗೂ ಮುನ್ನ ರಿಟೇನ್ ಆದ ಧ್ರುವ ಜುರೆಲ್, ಶಿಮ್ರೊನ್ ಹೆಟ್ಮೆಯರ್ ವೈಲ್ಯ ತಂಡಕ್ಕೆ ಮುಳುವಾಗಿದೆ. ರಾಜಸ್ಥಾನ ತಂಡ ಕೈಬಿಟ್ಟ ಆಟಗಾರರಾದ ಯಜುವೇಂದ್ರ ಚಾಹಲ್, ಜೋಸ್ ಬಟ್ಲರ್, ಪ್ರಸಿದ್ಧ ಕೃಷ್ಣ ಟೂರ್ನಿಯಲ್ಲಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ.
ಮುಖಾಮುಖಿ: 31
ರಾಜಸ್ಥಾನ: 14
ಕೆಕೆಆರ್: 15
ರದ್ದು: 2
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ತವರಿನ ಅಂಗಣವೇ ಚಾಲೆಂಜ್!
ಕೆಕೆಅರ್ ತಂಡದ ಭದ್ರಕೋಟೆ ಎನಿಸಿದ್ದ ಈಡನ್ ಗಾರ್ಡನ್ನಲ್ಲಿ ಈ ಬಾರಿ ನಿರೀತ ಯಶಸ್ಸು ದೊರೆತಿಲ್ಲ. ಇದುವರೆಗೆ ಮನೆ ಅಂಗಣದಲ್ಲಿ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಿರುವ 4 ಲೀಗ್ ಪಂದ್ಯಗಳಲ್ಲಿ 2 ಕೋಲ್ಕತದಲ್ಲಿ ಆಡುವುದು ಕೆಕೆಆರ್ಗೆ ಸವಾಲಿನಿಂದ ಕೂಡಿದೆ. ರಾಜಸ್ಥಾನ ಬಳಿಕ ಮೇ 7ರಂದು ಸಿಎಸ್ಕೆ ಎದುರು ಆಡಲಿದೆ. ನಂತರ ತವರಿನಾಚೆ ಸನ್ರೈಸರ್ಸ್ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಆರ್ಸಿಬಿ ಎದುರು ಮೇ 17ರಂದು ಬೆಂಗಳೂರಿನಲ್ಲಿ ಆಡಲಿದೆ. ಕ್ವಿಂಟನ್ ಡಿಕಾಕ್, ರಹಮಾನುಲ್ಲ ಗುರ್ಬಜ್ ಆರಂಭಿಕರಾಗಿ ಫಿಲ್ ಸಾಲ್ಟ್ ಸ್ಥಾನ ತುಂಬವಲ್ಲಿ ವಿಲರಾಗಿದ್ದಾರೆ. 23.75 ಕೋಟಿ ರೂ. ಪಡೆದಿರುವ ವೆಂಕಟೇಶ್ ಅಯ್ಯರ್ 10 ಇನಿಂಗ್ಸ್ಗಳಲ್ಲಿ 142 ರನ್ ಮಾತ್ರ ಕಲೆಹಾಕಿದ್ದಾರೆ. ನಾಯಕ ಅಜಿಂಕ್ಯ ರಹಾನೆ, ಅಂಗಕ್ರಿಶ್ ರುವಂಶಿ ಮೇಲೆ ಬ್ಯಾಟಿಂಗ್ ಅವಲಂಬಿತವಾಗಿದೆ. ಹಿಂದಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ರಹಾನೆ ಸಂಪೂರ್ಣವಾಗಿ ಫಿಟ್ ಆಗಿ ಮರಳುವ ನಿರೀೆ ಇದೆ. ಸುನೀಲ್ ನಾರಾಯಣ್ ಕೆಕೆಆರ್ನ ಟ್ರಂಪ್ ಕಾರ್ಡ್.