ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಡಿಸೆಂಬರ್ 6ರಿಂದ ನಡೆಯಲಿರುವ ವಿಜಯ್ ಮರ್ಚೆಂಟ್ ಟ್ರೋಫಿ 16 ವಯೋಮಿತಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಶನಿವಾರ ಪ್ರಕಟಿಸಿರುವ 35 ಆಟಗಾರರ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಅನ್ವಯ್, ಇತ್ತೀಚೆಗೆ ನಡೆದ 16 ವಯೋಮಿತಿ ಅಂತರ ವಲಯ ಟೂರ್ನಿಯಲ್ಲಿ ಬೆಂಗಳೂರು ವಲಯ ಪರ ತುಮಕೂರು ವಲಯದ ವಿರುದ್ಧ ಅಜೇಯ 200 ರನ್ ಬಾರಿಸಿದ ಆಧಾರದಲ್ಲಿ ಸ್ಥಾನ ಪಡೆದಿದ್ದಾರೆ. ದ್ರಾವಿಡ್ ಹಿರಿಯ ಪುತ್ರ ಸಮಿತ್ ದ್ರಾವಿಡ್ ಪ್ರಸಕ್ತ ಕರ್ನಾಟಕ ಪರ ಕೂಚ್ ಬೆಹಾರ್ ಟ್ರೋಫಿ 19 ವಯೋಮಿತಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.