ಕ್ರೀಡೆ

VIDEO| ಮಹಾರಾಜ ಟ್ರೋಫಿಯಲ್ಲಿ ರಾಹುಲ್​ ದ್ರಾವಿಡ್ ಪುತ್ರ ಸಮಿತ್​ ಭರ್ಜರಿ ಸಿಕ್ಸರ್​, ವಿಡಿಯೋ ವೈರಲ್​!

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಕೋಚ್​ ಹಾಗೂ ದಿಗ್ಗಜ ಬ್ಯಾಟರ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​, ಮೈಸೂರು ವಾರಿಯರ್ಸ್​ ಪರ ಮಹಾರಾಜ ಟ್ರೋಫಿಗೆ ಪದಾರ್ಪಣೆ ಮಾಡಿ ಆಡಿದ ಮೊದಲ 2 ಪಂದ್ಯಗಳಲ್ಲಿ ತಲಾ 7 ರನ್​ ಗಳಿಸಿ ನಿರಾಸೆ ಮೂಡಿಸಿದರು. ಈ ನಡುವೆ ಶುಕ್ರವಾರ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧದ ಪಂದ್ಯದಲ್ಲಿ ನವೀನ್​ ಎಂಜಿ ಎಸೆತದಲ್ಲಿ 18 ವರ್ಷದ ಸಮಿತ್​ ಡೀಪ್​ ಮಿಡ್​ವಿಕೆಟ್​ನತ್ತ ಸಿಡಿಸಿರುವ ಭರ್ಜರಿ ಸಿಕ್ಸರ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಮಿತ್​ ಸಿಕ್ಸರ್​ ಸಿಡಿಸಿದ ಆಕರ್ಷಕ ಹೊಡೆತಕ್ಕೆ ಕ್ರಿಕೆಟ್​ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.