ಬೆಂಗಳೂರು: ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ (211*ರನ್, 144 ಎಸೆತ, 26 ಬೌಂಡರಿ, 1 ಸಿಕ್ಸರ್) ಸಿಡಿಸಿದ ಮತ್ತೊಂದು ದ್ವಿಶತಕದ ನೆರವಿನಿಂದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲಾ ತಂಡ, 14 ವಯೋಮಿತಿ ಬಿಟಿಆರ್ ಶೀಲ್ಡ್ ಗ್ರೂಪ್-1, 2ನೇ ಡಿವಿಷನ್ ಟೂರ್ನಿಯಲ್ಲಿ ಚಾಂಪಿಯನ್ಪಟ್ಟ ಅಲಂಕರಿಸಿತು.
ಸಮಿತ್ ದ್ರಾವಿಡ್ ಟೂರ್ನಿಯಲ್ಲಿ ದಾಖಲಿಸಿದ 3ನೇ ದ್ವಿಶತಕ ಇದಾಗಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮಲ್ಯ ಅದಿತಿ ಶಾಲಾ ತಂಡ 132 ರನ್ಗಳಿಂದ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲಾ ತಂಡವನ್ನು ಸೋಲಿಸಿತು.