ನವದೆಹಲಿ: ಭಾರತ ತಂಡದ ಮುಖ್ಯಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿದ ಬಳಿಕ ಆ ಹುದ್ದೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನು ತಾತ್ಕಾಲಿಕವಾಗಿ ನೇಮಿಸುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ‘ರಾಹುಲ್ ದ್ರಾವಿಡ್‌ಗೆ ಕಾಯಂ ಆಗಿ ಕೋಚ್ ಆಗಲು ಇಷ್ಟವಿಲ್ಲ, ನಾವು ಕೂಡ ಅವರನ್ನು ಒತ್ತಾಯಿಸಿಲ್ಲ. ಅವರು ಬಯಸಿದಾಗ ಈ ಹುದ್ದೆ ನೀಡುವುದಾಗಿ’ ಗಂಗೂಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ?
ಇದೀಗ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರಾಗಿ ಮತ್ತೆರಡು ವರ್ಷಗಳ ಕಾಲ ಮುಂದುವರಿಯುವುದು ಖಚಿತವಾಗಿದೆ. ರವಿಶಾಸ್ತ್ರಿ ಮಾರ್ಗದರ್ಶನ ವಿರಾಟ್ ಕೊಹ್ಲಿ ಸಾರಥ್ಯದ ಟೆಸ್ಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ , ದ್ರಾವಿಡ್ ಮಾರ್ಗದರ್ಶನದ ಶಿಖರ್ ಧವನ್ ನಾಯಕತ್ವದ ನಿಗದಿತ ಓವರ್‌ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು.