ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಉತ್ತಮ ಕ್ರಿಕೆಟಿಗ ಎನಿಸಿಕೊಳ್ಳುವುದರ ಹಿಂದೆ ಅವರ ಸಾಕಷ್ಟು ಶ್ರಮವಿದೆ. ಭಾರತೀಯ ಕ್ರಿಕೆಟ್ನಲ್ಲಿ ದಿ ವಾಲ್ ಎಂದೇ ಕರೆಸಿಕೊಂಡ ದ್ರಾವಿಡ್ಗೆ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ. ಸ್ವತಃ ರಾಹುಲ್ ದ್ರಾವಿಡ್ ಹೇಳಿಕೊಂಡಿರುವಂತೆ ಭಾರತದಲ್ಲಿ ಕ್ರಿಕೆಟಿಗನಾಗಿ ಬೆಳೆಯುವುದು ಅಷ್ಟು ಸುಲಭವಲ್ಲ. ಛಲ ಬಿಡದೆ ಕ್ರಿಕೆಟ್ ಆಯ್ದುಕೊಂಡ ದ್ರಾವಿಡ್, ಸಿಎ ಅಥವಾ ಎಂಬಿಎ ಮಾಡುವ ಅವಕಾಶವನ್ನೇ ತ್ಯಜಿಸಿದರಂತೆ.
ಇದನ್ನೂ ಓದಿ: 3ಟಿ ಕ್ರಿಕೆಟ್ ಪಂದ್ಯದಲ್ಲಿ ಚಿನ್ನ ಗೆದ್ದ ಈಗಲ್ಸ್
1999ರ ಏಕದಿನ ವಿಶ್ವಕಪ್ ಟೂನಿರ್ಯಲ್ಲಿ ಗಮನಾರ್ಹ ನಿರ್ವಹಣೆ ತೋರಿದರು. 461 ರನ್ ಗಳಿಸಿ ಟೂನಿರ್ಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. 2003ರ ಏಕದಿನ ವಿಶ್ವಕಪ್ನಲ್ಲಿ ಆಡಿದ ದ್ರಾವಿಡ್, ಜತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದರು. 2007ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಮುನ್ನಡೆಸಿದ್ದರು. 344 ಏಕದಿನ ಪಂದ್ಯಗಳಿಂದ 12 ಶತಕ, 83 ಅರ್ಧಶತಕ ಸೇರಿದಂತೆ 10889 ರನ್ ಕಲೆಹಾಕಿದ್ದಾರೆ.