ಕ್ರೀಡೆ

VIDEO: ದುಬೈ ಸ್ಟೇಡಿಯಂನಲ್ಲೇ ಗೆಳತಿಗೆ ಪ್ರೇಮ ನಿವೇದಿಸಿಕೊಂಡ ಸಿಎಸ್‌ಕೆ ವೇಗಿ ದೀಪಕ್ ಚಹರ್

raghukittur

ದುಬೈ: ಸಿಎಸ್‌ಕೆ ವೇಗಿ ದೀಪಕ್ ಚಹರ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ಗೆಳತಿಗೆ ಪ್ರೇಮನಿವೇದನೆ ಮಾಡಿಕೊಂಡರು. ಕ್ರಿಕೆಟಿಗರ ಕುಟುಂಬ ಸದಸ್ಯರಿದ್ದ ಗ್ಯಾಲರಿಗೆ ತೆರಳಿದ ದೀಪಕ್, ಗೆಳತಿ ‘ಎಸ್’ ಎಂದ ಕೂಡಲೆ ಉಂಗುರ ತೊಡಿಸಿದರು. ಪ್ರತಿಯಾಗಿ ಗೆಳತಿ ಕೂಡ ಉಂಗುರ ತೊಡಿಸಿದರು. ಈ ವಿಡಿಯೋವನ್ನು ಸಿಎಸ್‌ಕೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದೆ.

ಬಳಿಕ ಟ್ವೀಟ್ ಮಾಡಿರುವ ದೀಪಕ್ ಚಹರ್ ಸಹೋದರಿ ಮಾಲತಿ ಚಹರ್, ದೆಹಲಿಯ ಮೂಲದ ಜಯ ಭಾರದ್ವಾಜ್‌ಗೆ ತಮ್ಮ ಪ್ರೇಮಿ ನಿವೇದಿಸಿಕೊಂಡರು ಎಂದು ಹೇಳಿದ್ದಾರೆ. ಆದರೆ, ಎಲ್ಲಿಯೂ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಪಂಜಾಬ್ ತಂಡ 6 ವಿಕೆಟ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿತು. ಪಂಜಾಬ್‌ಗೆ ಕಡಿವಾಣ ಹಾಕಲು ವಿಫಲವಾದ ದೀಪಕ್ ಚಹರ್ ತಮ್ಮ 4 ಓವರ್ ಕೋಟಾದಲ್ಲಿ 1 ವಿಕೆಟ್ ಪಡೆದು 48 ರನ್ ಬಿಟ್ಟುಕೊಟ್ಟರು.