ಕ್ರೀಡೆ

ಏಕದಿನ ವಿಶ್ವಕಪ್ 2023| ರಚಿನ್-ಕಾನ್ವೆ ಭರ್ಜರಿ ಶತಕ; ಇಂಗ್ಲೆಂಡ್ ಮಣಿಸಿ ಶುಭಾರಂಭ ಕಂಡ ನ್ಯೂಜಿಲೆಂಡ್

ಅಹಮದಾಬಾದ್: ಐಸಿಸಿ ಪುರುಷರ ಏಕದಿನ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್​ ವಿರುದ್ಧ ನ್ಯೂಜಿಲೆಂಡ್​ ತಂಡವು 9 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡವು ಜೋ ರೂಟ್​ (77 ರನ್, 86 ಎಸೆತ, 4 ಬೌಂಡರಿ, 1 ಸಿಕ್ಸರ್) ಫಲವಾಗಿ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 282 ರನ್​ ಗಳಿಸಿತ್ತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ (10-1-48-3), ಮಿಚೆಲ್​ ಸ್ಯಾಂಟ್ನರ್ (10-0-37-2), ಗ್ಲೆನ್ ಫಲಿಪ್ಸ್​​ (3-0-17-2), ರಚಿನ್ ರವೀಂದ್ರ (10-0-76-1), ಟ್ರೆಂಟ್ ಬೌಲ್ಟ್ (10-1-48-1), ಜಿಮ್ಮಿ ನೀಶಮ್ (7-0-56-0) ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರಿದರು.

283ರನ್​ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡವು ಆರಂಭಿಕ ಹೊಡೆತದ ಹೊರತಾಗಿಯೂ ಡೆವೋನ್​ ಕಾನ್ವೆ (152 ರನ್, 121 ಎಸೆತ, 19 ಬೌಂಡರಿ, 3 ಸಿಕ್ಸರ್), ರಚಿನ್ ರವೀಂದ್ರ (123 ರನ್, 96 ಎಸೆತ, 11 ಬೌಂಡರಿ, 5 ಸಿಕ್ಸರ್) 36.2 ಓವರ್​ಗಳಲ್ಲಿ 273 ರನ್​ಗಳ ಜತೆಯಾಟದ ಫಲವಾಗಿ ನ್ಯೂಜಿಲೆಂಡ್ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್​ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿತ್ತು.