ಬೆಂಗಳೂರು: ದಕ್ಷಿಣ ಭಾರತದ ಬಹು ಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕ್ರಿಕೆಟ್ ಮೇಲೆಯೂ ಬಹಳ ಆಸಕ್ತಿ ಇದೆ. ಇತ್ತೀಚೆಗೆ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಐಪಿಎಲ್ ಅಂದರೆ ನನಗೆ ಹುಚ್ಚು ಎಂದು ಹೇಳಿಕೊಂಡಿರುವ ರಶ್ಮಿಕಾ, ಆರ್ಸಿಬಿ ಮತ್ತು ಕೊಹ್ಲಿ ಕುರಿತು ಹೇಳಿರುವ ಮಾತು ಅಚ್ಚರಿಗೆ ದೂಡಿದೆ.
ರಶ್ಮಿಕಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೆಂದರೆ ತುಂಬಾ ಇಷ್ಟವಂತೆ. ಈ ಬಾರಿ ಆರ್ಸಿಬಿ ಖಂಡಿತ ಕಪ್ ಗೆಲ್ಲುತ್ತಿತ್ತು ಎಂದಿದ್ದಾರೆ. ಆದರೆ, ಕರೊನಾದಿಂದಾಗಿ ಐಪಿಎಲ್ ಅನ್ನು ಮುಂದೂಡಿರುವುದು ಅಭಿಮಾನಿಗಳ ಪಾಲಿಗೆ ಭಾರಿ ನಿರಾಶೆ ಆಗಿದೆ.
ಸ್ವಭಾತಃ ಆರ್ಸಿಬಿ ಫ್ಯಾನ್ ಎಂದಿರುವ ರಶ್ಮಿಕಾ ಅಚ್ಚುಮೆಚ್ಚಿನ ಕ್ರಿಕೆಟರ್ ಬಗ್ಗೆ ನೀಡಿರುವ ಹೇಳಿಕೆ ಎಲ್ಲರನ್ನು ಅಚ್ಚರಿಗೆ ದೂಡಿದೆ. ಅಂದಹಾಗೆ ರಶ್ಮಿಕಾಗೆ ವಿರಾಟ್ ಕೊಹ್ಲಿ ಫೇವರಿಟ್ ಅಲ್ಲವಂತೆ. ರಶ್ಮಿಕಾಗೆ ಚೆನ್ನೈ ಸೂಪರ್ಕಿಂಗ್ಸ್ ನಾಯಕ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅಂದರೆ ತುಂಬಾ ಇಷ್ಟವಂತೆ.
ಧೋನಿ ಅವರ ನಾಯಕತ್ವ, ವಿಕೆಟ್ ಕೀಪಿಂಗ್ ಮತ್ತು ಅವರ ಬ್ಯಾಟಿಂಗ್ ತುಂಬಾ ಇಷ್ಟವೆಂದು ರಶ್ಮಿಕಾ ಗುಣಗಾನ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ರಶ್ಮಿಕಾ ಅವರು ಸದ್ಯ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)