ಜೈಪುರ: ಹಾಲಿ ಋತುವಿನಲ್ಲಿ ಭರ್ಜರಿ ಫಾಮ್ರ್ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್ ಸ್ಥಾನ ಖಾತ್ರಿಪಡಿಸುವ ತವಕದಲ್ಲಿದೆ. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ರಾಜಸ್ಥಾನ ತಂಡಕ್ಕೆ ತವರಿನಲ್ಲಿ ಕೊನೇ ಪಂದ್ಯ ಇದಾಗಿದೆ.
ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಬ್ಲಾಕ್ಔಟ್ನಿಂದ ದಿಢೀರ್ ಮೊಟಕುಗೊಂಡ ನಂತರ ಪಂಜಾಬ್ ಕಿಂಗ್ಸ್ ಮರಳಿ ಕಣಕ್ಕಿಳಿಯಲಿದೆ. 2014ರ ಬಳಿಕ ಪ್ಲೇಆ್ಗೇರುವ ಹಂಬಲದಲ್ಲಿರುವ ಪಂಜಾಬ್ ಟೂರ್ನಿ ಸ್ಥಗಿತಕ್ಕೂ ಮುನ್ನ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು, 3 ಸೋಲು ಹಾಗೂ 1 ರದ್ದು ಸೇರಿ 15 ಅಂಕ ಹೊಂದಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ಪಡೆಗೆ ಇನ್ನೊಂದು ಗೆಲುವು ಪ್ಲೇಆ್ ಸ್ಥಾನ ಅಧಿಕೃತಪಡಿಸಲಿದೆ. ಇತ್ತ ರಾಜಸ್ಥಾನ ರಾಯಲ್ಸ್ ಪಾಲಿಗೆ ಉಳಿದಿರುವ ಮೂರು ಲೀಗ್ ಪಂದ್ಯಗಳು ಪ್ರತಿಷ್ಠೆಯ ಹೋರಾಟ ಎನಿಸಿದ್ದು, ಅಂಕಪಟ್ಟಿಯ ಕೊನೇ ಸ್ಥಾನ ತಪ್ಪಿಸುವ ಸವಾಲು ಹೊಂದಿದೆ. ರಾಜಸ್ಥಾನ ತಂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 3 ಗೆಲುವು, 9 ಸೋಲಿನೊಂದಿಗೆ 6 ಅಂಕ ಪಾಯಿಂಟ್ಸ್ ಹೊಂದಿದ್ದು, ಅಂಕಪಟ್ಟಿಯ 9ನೇ ಸ್ಥಾನದಲ್ಲಿದೆ.
ಗಾಯದ ಸಮಸ್ಯೆಯಿಂದಾಗಿ ವೇಗಿ ಜೋಫ್ರಾ ಆರ್ಚರ್ ಟೂರ್ನಿಯ ಉಳಿದ ಭಾಗಕ್ಕೆ ಅಲಭ್ಯರಾಗಿದ್ದು, ರಾಜಸ್ಥಾನ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹಿನ್ನಡೆ ತಂದಿದೆ. ಜತೆಗೆ ಕಾಯಂ ನಾಯಕ ಸಂಜು ಸ್ಯಾಮ್ಸನ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಲ್ಹುವಾನ್ ಡ್ರೆ ಪ್ರಿಟೋರಿಯಸ್, ನಾಂಡ್ರೆ ರ್ಬಗರ್ ಹೊಸದಾಗಿ ಬದಲಿ ಆಟಗಾರರಾಗಿ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಹಂಗಾಮಿ ನಾಯಕ ರಿಯಾನ್ ಪರಾಗ್ ಬ್ಯಾಟಿಂಗ್ ವಿಭಾಗದ ಪ್ರಮುಖ ಎನಿಸಿದ್ದಾರೆ.
11 ವರ್ಷಗಳ ನಂತರ ಪ್ಲೇಆಫ್ ಎಂಟ್ರಿ?
ಕಳೆದ ವರ್ಷ ಕೆಕೆಆರ್ ತಂಡಕ್ಕೆ ದಶಕದ ಬಳಿಕ ಪ್ರಶಸ್ತಿ ಗೆದ್ದುಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್, ಈ ಬಾರಿ 11 ವರ್ಷಗಳ ಬಳಿಕ ಪಂಜಾಬ್ ತಂಡವನ್ನು ಪ್ಲೇಆ್ಗೇರಿಸುವ ಅವಕಾಶ ಹೊಂದಿದ್ದಾರೆ. ಹಾಲಿ ಋತುವಿನಲ್ಲಿ ಪ್ಲೇಆ್ ಪ್ರವೇಶಿಸಿದ ಮೊದಲ ಎನಿಸುವ ಹಾದಿಯಲ್ಲಿದ್ದ ಪಂಜಾಬ್ ಕಿಂಗ್ಸ್ಗೆ ಟೂರ್ನಿಯ ತಾತ್ಕಾಲಿಕ ಮುಂದೂಡಿಕೆ ಪ್ಲೇಆ್ ಪ್ರವೇಶ ವಿಳಂಬಗೊಳಿಸಿತು. ಈ ವಿಳಂಬ ಪ್ರಮುಖ ವಿದೇಶಿ ಆಟಗಾರರ ಗೈರಿಗೂ ಕಾರಣವಾಗಿದ್ದು, ರಾಜಸ್ಥಾನ ವಿರುದ್ಧ ಪಂದ್ಯಕ್ಕೆ ಆಸ್ಟ್ರೆಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್, ವಿಕೆಟ್ ಕೀಪರ್&ಬ್ಯಾಟರ್ ಜೋಶ್ ಇಂಗ್ಲಿಸ್ ಅಲಭ್ಯರಾಗಿದ್ದಾರೆ. ಜತೆಗೆ ಆಫ್ರಿಕಾದ ಆಲ್ರೌಂಡರ್ ಮಾಕೋರ್ ಜಾನ್ಸೆನ್ ಲಭ್ಯತೆಯೂ ಅನಿಶ್ಚಿತತೆಯಿಂದ ಕೂಡಿದೆ. ಗ್ಲೆನ್ ಮಾಕ್ಸ್ವೆಲ್ ಕಳಪೆ ಫಾಮ್ ಹೊಂದಿರುವ ತಂಡಕ್ಕೆ ಮತ್ತಷ್ಟು ತಲೆನೋವಾಗಿದೆ. ಪ್ರಭ್ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ನೇಹಲ್ ವಧೇರ ಅವರಂಥ ಭಾರತೀಯರಿಂದ ಕೂಡಿದ ಸದೃಢ ಬ್ಯಾಟಿಂಗ್ ವಿಭಾಗ ಹೊಂದಿದೆ. ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ ಹಾಗೂ ಯಜುವೇಂದ್ರ ಚಾಹಲ್ ತಲಾ 14 ವಿಕೆಟ್ ಕಬಳಿಸಿದ್ದು, ಪ್ರಮುಖ ಶಕ್ತಿ ಎನಿಸಿದ್ದಾರೆ.
11. ಪಂಜಾಬ್ ಕಿಂಗ್ಸ್ ತಂಡ 11 ವರ್ಷಗಳ ಬಳಿಕ ಪ್ಲೇಆಫ್ ಸನಿಹದಲ್ಲಿದ್ದು, 2014ರಲ್ಲಿ ಕೊನೆಯದಾಗಿ ಪ್ಲೇಆ್ ಆಡಿತ್ತು.
ಮುಖಾಮುಖಿ: 29
ಪಂಜಾಬ್:12
ರಾಜಸ್ಥಾನ:17
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಪ್ಲೇಆಫ್ ಹಾದಿ....
ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಮುಂಬರುವ ತನ್ನ ಮೂರು ಲೀಗ್ ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೂ, ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ರಾಜಸ್ಥಾನ ನಂತರ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಎದುರು ಶ್ರೇಯಸ್ ಅಯ್ಯರ್ ಪಡೆ ಕಣಕ್ಕಿಳಿಯಲಿದೆ. ಮೂರು ಅಥವಾ ಎರಡು ಜಯ ಸಾಧಿಸಿದರೆ, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶವೂ ಹೊಂದಿದೆ. ಒಂದು ವೇಳೆ ಮೂರರಲ್ಲಿಯೂ ಸೋತರೆ, ಪ್ಲೇಆ್ ಹುಡುಕಾಟ ಕನಿಷ್ಠ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.