ಕ್ರೀಡೆ

ಇಂದು ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ; ಮಳೆಯಿಂದ ಟಾಸ್ ವಿಳಂಬ|Ipl-2025

ipl-2025 |  ಧರ್ಮಶಾಲಾದಲ್ಲಿ ಮಳೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಟಾಸ್ ವಿಳಂಬವಾಗಿದೆ.

IPL 2025 ರ 58 ನೇ ಪಂದ್ಯದಲ್ಲಿ  ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ ಕ್ರೀಡಾಂಗಣದಲ್ಲಿ ಪಂಜಾಬ್​  ಡೆಲ್ಲಿ ವಿರುದ್ಧ ಸೆಣಸಲಿದೆ.

ಐಪಿಎಲ್ ವೇಳಾಪಟ್ಟಿಯಂತೆ ಪಂಜಾಬ್ ಕಿಂಗ್ಸ್​ ಮತ್ತು  ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಮಹತ್ವದ ಪಂದ್ಯಕ್ಕೆ ಸಂಜೆ 7 ಗಂಟೆಗೆ ಸರಿಯಾಗಿ ಟಾಸ್ ಆಗಬೇಕಿತ್ತು. ಆದರೆ ಕ್ರಿಕೆಟ್ ಸ್ಟೇಡಿಯಂ ಸುತ್ತ ಮಳೆ ಆರ್ಭಟ ಮುಂದುವರೆದಿದ್ದು, ಪಂದ್ಯ ನಡೆಯುವ ಮೊದಲೇ ಮಳೆ ಜೋರಾಗಿದ್ದರಿಂದ ಇನ್ನೂ ಕೂಡ ಟಾಸ್ ಹಾಕಲಾಗಿಲ್ಲ.

ಇನ್ನೇನು ಹಾಕಬೇಕು ಅನ್ನುವಷ್ಟರಲ್ಲಿ ಮಳೆ ಜೋರಾಗಿದೆ. ಹಾಗಾಗಿ ಎಲ್ಲರೂ ವಾಪಸ್ ಟ್ರೆಸ್ಸಿಂಗ್ ರೂಮ್ ಕಡೆ ಹೋಗಿದ್ದಾರೆ. ಉಳಿದಂತೆ ಸ್ಟೇಡಿಯಂನ ಸಿಬ್ಬಂದಿ ಪಿಚ್ ಅನ್ನು ಕವರ್​ಗಳಿಂದ ಮುಚ್ಚಿದ್ದಾರೆ. ಸದ್ಯಕ್ಕೆ ಮಳೆ ನಿಲ್ಲುವುದನ್ನೇ ಎಲ್ಲರೂ ಕಾದು ಕುಳಿತ್ತಿದ್ದಾರೆ.