ಮುಂಬೈ: ಅಧಿಕ ತೂಕದಿಂದಾಗಿ ಫಿಟ್ನೆಸ್ ಸಮಸ್ಯೆ ಮತ್ತು ಅಶಿಸ್ತಿನ ವರ್ತನೆಯ ಕಾರಣ ಕಾರಣದಿಂದಾಗಿ ಬ್ಯಾಟರ್ ಪೃಥ್ವಿ ಷಾ ಅವರನ್ನು ರಣಜಿ ಟ್ರೋಫಿಯ 3ನೇ ಲೀಗ್ ಪಂದ್ಯಕ್ಕೆ ಹಾಲಿ ಚಾಂಪಿಯನ್ ಮುಂಬೈ ತಂಡದಿಂದ ಕೈಬಿಡಲಾಗಿದೆ. 2 ವಾರಗಳ ಫಿಟ್ನೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೂಕ ತಗ್ಗಿಸಿಕೊಳ್ಳುವಂತೆ ಪೃಥ್ವಿ ಷಾಗೆ ಮುಂಬೈ ಕ್ರಿಕೆಟ್ ಸಂಸ್ಥೆ ಸೂಚಿಸಿದೆ.
24 ವರ್ಷದ ಪೃಥ್ವಿ ಷಾ ಮುಂಬೈ ತಂಡದ ಮೊದಲ 2 ಪಂದ್ಯಗಳಲ್ಲಿ 59 ರನ್ (7, 12, 1, 39) ಮಾತ್ರ ಗಳಿಸಿದ್ದಾರೆ. ಭಾರತ ಪರ 5 ಟೆಸ್ಟ್, 6 ಏಕದಿನ, 1 ಟಿ20 ಪಂದ್ಯ ಕೂಡ ಆಡಿರುವ ಈ ಹಿಂದೆಯೂ ಫಿಟ್ನೆಸ್ ಮತ್ತು ಅಶಿಸ್ತಿನ ಸಮಸ್ಯೆ ಎದುರಿಸಿದ್ದರು.