ಕ್ರೀಡೆ

ಹೆಚ್ಚು ಟೆಸ್ಟ್ ಆಡಿದವರಿಗೆ ಅಧ್ಯಕ್ಷ ಪಟ್ಟ

chandru

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎಂಬ ಗೊಂದಲ

ವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಗೆಹರಿಸಿದ್ದಾರೆ . ಆಯ್ಕೆ ಸಮಿತಿಯ ಐವರು ಸದಸ್ಯರ ಪೈಕಿ ಯಾರು ಅತಿ ಹೆಚ್ಚು ಟೆಸ್ಟ್ ಪಂದ್ಯ ಗಳನ್ನು ಆಡಿರುತ್ತಾರೋ ಅವರೇ ಅಧ್ಯಕ್ಷರಾಗಿ ಆಯ್ಕೆ

ಯಾಗುತ್ತಾರೆ. ಭಾರತ ಪರ ಯಾರು ಮೊದಲಿಗೆ ಆಡಿದ್ದಾರೆ ಅಥವಾ ಹೆಚ್ಚು ಹಿರಿಯರಾಗಿದ್ದಾರೆ ಎಂಬ ಮಾನದಂಡ ಪರಿಗಣನೆಗೆ ಬರುವುದಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಮತ್ತು ಸದಸ್ಯ ಗಗನ್ ಖೋಡಾ ಅವರಿಂದ ತೆರವಾಗುತ್ತಿರುವ 2 ಸ್ಥಾನಗಳಿಗೆ ಅರ್ಹರನ್ನು ಆರಿಸಲು ಬಿಸಿಸಿಐ ಈಗಾಗಲೆ ಕ್ರಿಕೆಟ್ ಸಲಹಾ ಸಮಿತಿಯನ್ನು ನೇಮಿಸಿದೆ. ಹಾಲಿ ಆಯ್ಕೆ ಸಮಿತಿಯ ಮೂವರು ಸದಸ್ಯರ ಪೈಕಿ ದೇವಾಂಗ್ ಗಾಂಧಿ 4, ಶರಣ್​ದೀಪ್ ಸಿಂಗ್ 3 ಟೆಸ್ಟ್ ಆಡಿದ್ದರೆ, ಜತಿನ್ ಪರಾಂಜಪೆ ಟೆಸ್ಟ್ ಪಂದ್ಯವನ್ನೇ ಆಡಿಲ್ಲ. ಹೀಗಾಗಿ ಆಯ್ಕೆಗಾರರಾಗಲು ಅರ್ಜಿ ಸಲ್ಲಿಸಿರುವ ಮಾಜಿ ವೇಗಿಗಳಾದ ಅಜಿತ್ ಅಗರ್ಕರ್ (26 ಟೆಸ್ಟ್), ವೆಂಕಟೇಶ್ ಪ್ರಸಾದ್ (33 ಟೆಸ್ಟ್) ಆಯ್ಕೆಯಾದರೆ, ಅಧ್ಯಕ್ಷರಾಗುವ ಅವಕಾಶವೂ ಹೆಚ್ಚಿದೆ. ಆದರೆ ವೆಂಕಿ ಈಗಾಗಲೆ ಜೂನಿಯರ್ ಆಯ್ಕೆ ಸಮಿತಿ ಸದಸ್ಯರಾಗಿ ಒಂದೂವರೆ ವರ್ಷ ಸೇವೆ ಸಲ್ಲಿಸಿರುವ ಕಾರಣ, ರಾಷ್ಟ್ರೀಯ ಆಯ್ಕೆಗಾರರಾಗಿ 4 ವರ್ಷ ಪೂರ್ಣಾವಧಿ ಕಾರ್ಯನಿರ್ವಹಿಸಲು ಲಭ್ಯರಿದ್ದಾರೆಯೇ ಎಂಬ ಬಗ್ಗೆ ಗೊಂದಲಗಳಿವೆ.

ಇನ್ನು ಪಶ್ಚಿಮ ವಲಯದಿಂದ ಈಗಾಗಲೆ ಜತಿನ್ ಪರಾಂಜಪೆ ಆಯ್ಕೆ ಸಮಿತಿಯಲ್ಲಿರುವುದರಿಂದ, ವಲಯವಾರು ಪದ್ಧತಿ ಮುಂದುವರಿದರೆ ಅದೇ ವಲಯದ ಅಜಿತ್ ಅಗರ್ಕರ್ ಆಯ್ಕೆಯಾಗುವುದು ಅನುಮಾನ. ಇದರಿಂದ 9 ಟೆಸ್ಟ್ ಆಡಿರುವ ಎಲ್. ಶಿವರಾಮಕೃಷ್ಣನ್ ಅವರಿಗೂ ಆಯ್ಕೆಯಾದರೆ, ಅಧ್ಯಕ್ಷರಾಗುವ ಅವಕಾಶವಿದೆ. -ಏಜೆನ್ಸೀಸ್