Rameshbabu Praggnanandhaa 
ಕ್ರೀಡೆ

ಗುಕೇಶ್​ಗೆ ಸೋಲು...ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ.... praggnanandhaa

ನವದೆಹಲಿ: ( praggnanandhaa ) ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್‌ನಲ್ಲಿ ಡಿ. ಗುಕೇಶ್​ಗೆ ಸೋಲುಣಿಸಿ ಆರ್ ಪ್ರಜ್ಞಾನಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಆರ್​. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರೆ, ಡಿ ಗುಕೇಶ್ ಅವರು ಅರ್ಜುನ್ ಎರಿಗೈಸಿ ವಿರುದ್ಧ ಸೋಲನುಭವಿಸಿದರು.  ಬಳಿಕ ನಡೆದ ಬ್ಲಿಟ್ಜ್ ಪ್ಲೇಆಫ್‌ಗಳಲ್ಲಿ, ಪ್ರಜ್ಞಾನಂದ ಅವರು ಗುಕೇಶ್ ವಿರುದ್ಧ ಮೊದಲ ಗೇಮ್‌ನಲ್ಲಿ ಸೋತರು. ಆ ಬಳಿಕ ಕಂಬ್ಯಾಕ್ ಮಾಡಿದ ಪ್ರಜ್ಞಾನಂದ ಸತತ ಎರಡು ಗೇಮ್​ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿಯ ಫೈನಲ್​ ಸುತ್ತಿನ ಮುಕ್ತಾಯದ ವೇಳೆಗೆ ಡಿ ಗುಕೇಶ್ ಅಗ್ರಸ್ಥಾನ ಅಲಂಕರಿಸಿದರೆ, ಆರ್​. ಪ್ರಜ್ಞಾನಂದ ದ್ವಿತೀಯ ಸ್ಥಾನ ಪಡೆದಿದ್ದರು. ಇಬ್ಬರು 8.5 ಅಂಕಗಳನ್ನು ಹೊಂದಿದ್ದರಿಂದ ಚಾಂಪಿಯನ್ ನಿರ್ಣಾಯಕಕ್ಕಾಗಿ ಟ್ರೈಬ್ರೇಕರ್​ ಮೊರೆ ಹೋಗಲಾಯಿತು.

ಈ ನಿರ್ಣಾಯಕ ಸುತ್ತಿನಲ್ಲಿ ವಿಶ್ವ ಚಾಂಪಿಯನ್​ ಡಿ. ಗುಕೇಶ್ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಆರ್​. ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.