Prabhsimran Singh: ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಪ್ರಭಾಸಿಮ್ರನ್ ಸಿಂಗ್, ತಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ತಂಡವನ್ನು ತೊರೆದು ಹೊರನಡೆಯದೆ ಇರುವುದು ಇದೀಗ ಹಲವರ ಮೆಚ್ಚುಗೆಗೆ ಕಾರಣವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಪುಟಿನ್; ರಷ್ಯಾದ ಸಂಪೂರ್ಣ ಬೆಂಬಲ ಭಾರತಕ್ಕಿದೆ ಎಂದು ಸ್ಪಷ್ಟನೆ |Russia Support
ಈ ಬಾರಿಯ ಆವೃತ್ತಿಯಲ್ಲಿ ಪಂಜಾಬ್ ಪರ ಸ್ಫೋಟಕ ಇನ್ನಿಂಗ್ಸ್ ನೀಡುತ್ತ ಬಂದಿರುವ ಪ್ರಭಾಸಿಮ್ರನ್ ಸಿಂಗ್, ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಿಂಗ್, ಕೇವಲ 48 ಎಸೆತದಲ್ಲಿ 91 ರನ್ ಗಳಿಸಿ, ಶತಕ ವಂಚಿತರಾದರು. ಒಂದೆಡೆ ಬೇಸರಗೊಂಡರು ಮತ್ತೊಂದೆಡೆ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಗೆ ತಾನು ಒಳ್ಳೆಯ ಇನ್ನಿಂಗ್ಸ್ ಆಡಿದೆ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
ಪ್ರಭಾಸಿಮ್ರನ್ ಸಿಂಗ್ ಅವರ ತಂದೆ ಸರ್ದಾರ್ ಸುರ್ಜಿತ್ ಸಿಂಗ್ ಪ್ರಸ್ತುತ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಕಷ್ಟಕರವಾಗಿದೆ. ಇಂತಹ ಕಠಿಣ ಸಮಯದಲ್ಲಿ, ಪಂಜಾಬ್ ಪರ ಪುತ್ರನ ಆಟ ನೋಡಿದರೆ ಮಾತ್ರ ಸುರ್ಜಿತ್ ಸಿಂಗ್ ಅವರ ಮುಖದಲ್ಲಿ ನಗು ಮೂಡುತ್ತಿದೆ ಎಂದು ಪ್ರಭ್ಸಿಮ್ರನ್ ಸಹೋದರ ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಅವರು ನಗುತ್ತಿರುವುದು ಐಪಿಎಲ್‌ನಲ್ಲಿ ಪ್ರಭ್ ಸಿಮ್ರಾನ್ ಬ್ಯಾಟಿಂಗ್ ಮಾಡುವುದನ್ನು ನೋಡಿದಾಗ ಮಾತ್ರ. ತಂದೆ ಈಗ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಪಂಜಾಬ್ ಕಿಂಗ್ಸ್‌ನ ಪ್ರತಿ ಪಂದ್ಯಕ್ಕೂ ಮೊದಲು, ನಾನು ಅವರನ್ನು ಲಿವಿಂಗ್ ರೂಮ್ಗೆ ಕರೆದುಕೊಂಡು ಹೋಗ್ತೇನೆ. ನಾವೆಲ್ಲರೂ ಒಟ್ಟಿಗೆ ಕುಳಿತು ಪಂದ್ಯ ನೋಡುತ್ತೇವೆ. ಟಿವಿಯಲ್ಲಿ ಅಣ್ಣ ಕಾಣಿಸಿದರೆ ಸಾಕು ನಮ್ಮ ತಂದೆಯ ಮುಖದಲ್ಲಿ ಖುಷಿ ಮೂಡುತ್ತದೆ. ಅವನು ಉತ್ತಮ ಬ್ಯಾಟಿಂಗ್ ಮಾಡಿದರೆ, ಖುಷಿಯಿಂದ ಸಂಭ್ರಮಿಸುತ್ತಾರೆ" ಎಂದು ಸತ್ವಿಂದರ್‌ಪಾಲ್ ಸಿಂಗ್ ತಿಳಿಸಿದ್ದಾರೆ,(ಏಜೆನ್ಸೀಸ್).