ಕ್ರೀಡೆ

ಐಪಿಎಲ್ ತಂಡಗಳನ್ನು ಸೇರಿಕೊಂಡ ಸಿಪಿಎಲ್ ಸ್ಟಾರ್ಸ್‌

ಅಬುಧಾಬಿ: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯಲ್ಲಿ ಟ್ರಿನ್‌ಬಾಗೋ ನೈಟ್‌ರೈಡರ್ಸ್‌ ತಂಡ ಅಜೇಯವಾಗಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಾಯಕ ಕೈರಾನ್ ಪೊಲ್ಲಾರ್ಡ್ ಸಹಿತ ಟೂರ್ನಿಯಲ್ಲಿ ಆಡಿದ ಎಲ್ಲ ಆಟಗಾರರು ಶನಿವಾರ ಯುಎಇಯಲ್ಲಿ ಐಪಿಎಲ್ ತಂಡಗಳನ್ನು ಕೂಡಿಕೊಂಡಿದ್ದಾರೆ.

ಕರೊನಾ ಕಾಲದಲ್ಲಿ ನಡೆದ ಮೊದಲ ಟಿ20 ಲೀಗ್ ಸಿಪಿಎಲ್ ಟೂರ್ನಿ ಗುರುವಾರ ಮುಕ್ತಾಯ ಕಂಡಿದ್ದು, ಅದರ ಬೆನ್ನಲ್ಲೇ ಐಪಿಎಲ್‌ನಲ್ಲಿ ಆಡಲಿರುವ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿದ್ದು, ಅದಕ್ಕೆ ಮುನ್ನ ಎಲ್ಲ ಆಟಗಾರರ 6 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳಲಿದೆ.

ಕೈರಾನ್ ಪೊಲ್ಲಾರ್ಡ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿರುವ ಚಿತ್ರವನ್ನು ಮುಂಬೈ ಇಂಡಿಯನ್ಸ್ ತಂಡದ ಸಾಮಾಜಿಕ ಜಾಲತಾಣದ ಪುಟದಲ್ಲಿ ಪ್ರಕಟಿಸಲಾಗಿದೆ.

ಸಿಪಿಎಲ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಮಾತ್ರವಲ್ಲದೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಆಟಗಾರರೂ ಆಡಿದ್ದರು. ಈ ಪೈಕಿ ಕೆಲ ಆಟಗಾರರು ಟೂರ್ನಿಯ ಲೀಗ್ ಹಂತ ಮುಗಿದ ಬೆನ್ನಲ್ಲೇ ಯುಎಇಗೆ ಆಗಮಿಸಿದ್ದರು.

ಸಿಪಿಎಲ್‌ನಿಂದ ಐಪಿಎಲ್ ತಂಡಗಳನ್ನು ಕೂಡಿಕೊಂಡ ಆಟಗಾರರು:

ಚೆನ್ನೈ ಸೂಪರ್‌ಕಿಂಗ್ಸ್: ಡ್ವೇಯ್ನ ಬ್ರಾವೊ, ಮಿಚೆಲ್ ಸ್ಯಾಂಟ್ನರ್, ಇಮ್ರಾನ್ ತಾಹಿರ್.

ಮುಂಬೈ ಇಂಡಿಯನ್ಸ್: ಕೈರಾನ್ ಪೊಲ್ಲಾರ್ಡ್, ಕ್ರಿಸ್ ಲ್ಯಾನ್, ಶೆರ್ನ್ ರುದರ್‌ೆರ್ಡ್.

ಸನ್‌ರೈಸರ್ಸ್‌: ಮೊಹಮದ್ ನಬಿ, ರಶೀದ್ ಖಾನ್, ್ಯಾಬಿಯನ್ ಅಲೆನ್.

ಕೋಲ್ಕತ ನೈಟ್‌ರೈಡರ್ಸ್‌: ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ಕ್ರಿಸ್ ಗ್ರೀನ್.

ಡೆಲ್ಲಿ ಕ್ಯಾಪಿಟಲ್ಸ್: ಶಿಮ್ರೋನ್ ಹೆಟ್ಮೆಯರ್, ಸಂದೀಪ್ ಲಮಿಚೆನ್, ಕೀಮೊ ಪೌಲ್.

ಕಿಂಗ್ಸ್ ಇಲೆವೆನ್ ಪಂಜಾಬ್: ಶೆಲ್ಡನ್ ಕಾಟ್ರೆಲ್, ಮುಜೀಬ್ ಉರ್ ರೆಹಮಾನ್, ನಿಕೋಲಸ್ ಪೂರನ್.

ರಾಜಸ್ಥಾನ ರಾಯಲ್ಸ್: ಒಶಾನೆ ಥಾಮಸ್.