ಕ್ರೀಡೆ

ಬರ್ತ್ ಡೇ ವಿಷ್ ಮಾಡಿದ ಕೊಹ್ಲಿಗೆ ಪ್ರಧಾನಿ ಮೋದಿ ಹೇಳಿದ್ದೇನು..?

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರವಷ್ಟೇ 70 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಕ್ರೀಡಾವಲಯದ ದಿಗ್ಗಜರು ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ವಿರಾಟ್ ಕೊಹ್ಲಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಜತೆಗೆ ಜನವರಿಯಲ್ಲಿ ಅಪ್ಪ-ಅಮ್ಮನಾಗುತ್ತಿರುವ ಕೊಹ್ಲಿ-ಅನುಷ್ಕಾ ದಂಪತಿ ಕುರಿತು, ನೀವು ಅತ್ಯುತ್ತಮ ಪಾಲಕರಾಗುವಿರಿ ಎಂದು ಮೋದಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೊಹ್ಲಿ ಕೂಡ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಸಲುವಾಗಿ ಸದ್ಯ ಯುಎಇಯಲ್ಲಿರುವ ಕೊಹ್ಲಿ, ಕಠಿಣ ತರಬೇತಿ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಗುರುವಾರ ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಬಳಿಕ ಮೋದಿ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ದಂಪತಿಗೆ ಶುಭ ಹೇಳಿದ್ದಾರೆ. ವಿರಾಟ್ ಕೊಹ್ಲಿ ಆಗಸ್ಟ್ 27 ರಂದು ಅನುಷ್ಕಾ ಶರ್ಮ ಗರ್ಭಿಣಿಯಾಗಿರುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

ಕೋವಿಡ್-19 ಮಹಾಮಾರಿಯಿಂದಾಗಿ 13ನೇ ಐಪಿಎಲ್ ಯುಎಇಯಲ್ಲಿ ಶನಿವಾರದಿಂದ ಆರಂಭಗೊಳ್ಳುತ್ತಿದೆ. ಕೊಹ್ಲಿ ಸಾರಥ್ಯದ ಆರ್‌ಸಿಬಿ ಸೆ.21 ರಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಯುಎಇಯ ಮೂರು ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ.