ವಿಶ್ವ ಚೆಸ್​ನಲ್ಲಿ ಹಂಪಿ, ಅರ್ಜುನ್​ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ 
ಕ್ರೀಡೆ

ವಿಶ್ವ ರ‍್ಯಾಪಿಡ್‌ ಚೆಸ್​ನಲ್ಲಿ ಹಂಪಿ, ಅರ್ಜುನ್​ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ನವದೆಹಲಿ: ಫಿಡೆ ವಿಶ್ವ ರ‍್ಯಾಪಿಡ್‌ ಚೆಸ್​ ಚಾಂಪಿಯನ್​ಷಿಪ್​ನಲ್ಲಿ (FIDE World Rapid Championships) ಕ್ರಮವಾಗಿ ಮಹಿಳಾ ಮತ್ತು ಮುಕ್ತ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡ ಭಾರತದ ಗ್ರಾಂಡ್​ ಮಾಸ್ಟರ್​ಗಳಾದ ಕೊನೆರು ಹಂಪಿ (Koneru Humpy) ಮತ್ತು ಅರ್ಜುನ್​ ಇರಿಗೈಸಿ (Arjun Erigaisi) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಅಭಿನಂದಿಸಿದ್ದಾರೆ.

ಚೆಸ್​ ಆಟದ ಬಗೆಗಿನ ಹಂಪಿ ಸಮರ್ಪಣೆ ಶ್ಲಾನೀಯವಾದುದು. ಅರ್ಜುನ್​ ಅವರ ಸಾಧನೆಯೂ ಹೆಮ್ಮೆ ತಂದಿದೆ. ಅವರ ದಿಟ್ಟತನ ಗಮನಾರ್ಹವಾದುದು ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರಶಂಸಿಸಿದ್ದಾರೆ. ಜತೆಗೆ ಭವಿಷ್ಯದ ಟೂರ್ನಿಗಳಿಗೆ ಶುಭ ಹಾರೈಸಿದ್ದಾರೆ.

38 ವರ್ಷದ ಕೊನೆರು ಹಂಪಿ ವಿಶ್ವ
ರ‍್ಯಾಪಿಡ್‌ ಚಾಂಪಿಯನ್​ಷಿಪ್​ನಲ್ಲಿ 4ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಅವರು ಈ ಮುನ್ನ 2019, 2024ರಲ್ಲಿ ಚಾಂಪಿಯನ್​ ಆಗಿದ್ದರೆ, 2012ರಲ್ಲಿ ಬೆಳ್ಳಿ ಜಯಿಸಿದ್ದರು. 22 ವರ್ಷದ ಅರ್ಜುನ್​ ವಿಶ್ವ ರ‍್ಯಾಪಿಡ್‌ ಮುಕ್ತ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದ 2ನೇ ಭಾರತೀಯರಾಗಿದ್ದಾರೆ. ವಿಶ್ವನಾಥನ್​ ಆನಂದ್​ 2 ಬಾರಿ (2003, 2017) ಚಾಂಪಿಯನ್​ ಪಟ್ಟಕ್ಕೇರಿದ್ದರು.