ಕ್ರೀಡೆ

VIDEO| ದಯವಿಟ್ಟು CSK ಕ್ಯಾಪ್ಟನ್​ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್​

Webdesk - Manjunatha B

ಮುಂಬೈ: ಗುಜರಾತ್​ ಟೈಟಾನ್ಸ್​ ಎದುರು ಮೊದಲ ಪಂದ್ಯದ ಸೋಲಿನ ಬಳಿಕ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಲಯದಲ್ಲಿರುವ ಚೆನೈ ಸೂಪರ್​ ಕಿಂಗ್ಸ್​​​ಗೆ ಅಭಿಮಾನಿ ಒಬ್ಬರು ವಿಶಿಷ್ಟ ಮನವಿಯನ್ನು ಮಾಡಿದ್ದಾರೆ.

ಶನಿವಾರ MI ವಿರುದ್ಧ ಪಂಡ್ಯ ಆಡಲು ಮುಂಬೈಗೆ ತೆರಳುತ್ತಿದ್ದ ವೇಳೆ ಧೋನಿ ಅಭಿಮಾನಿ ಒಬ್ಬರು ವಿಶಿಷ್ಟ ಬೇಡಿಕೆಯನ್ನು ಇಡುವ ಮೂಲಕ ಸುದ್ದಿಯಲ್ಲಿದ್ದಾರೆ.

CSKಗೆ ವಿಶಿಷ್ಟ ಬೇಡಿಕೆ ಇಟ್ಟ ಪೈಲಟ್​

ಶನಿವಾರ MI ವಿರುದ್ಧ ಆಡಲು ಚೆನೈನಿಂದ ಮುಂಬೈಗೆ CSK ತಂಡ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಧೋನಿ ಅಭಿಮಾನಿ ಆಗಿರುವ ಪೈಲಟ್​ ವಿಶಿಷ್ಟ ಮನವಿಯನ್ನು ಮಾಡಿದ್ದಾರೆ.

ಧೋನಿಯನ್ನು ಉದ್ದೇಶಿಸಿ ವಿಮಾನದ ಕಾಕ್​ಪಿಟ್​ನಲ್ಲಿ ಮಾತನಾಡಿದ ಪೈಲಟ್​ ನೀವು CSK ಕ್ಯಾಪ್ಟನ್ ಆಗಿ ಮುಂದುವರೆಯಿರಿ ಇದು ನನ್ನದೊಂದು ಸಣ್ಣ ಮನವಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.