ಕ್ರೀಡೆ

ವಾಂಖೆಡೆಯಲ್ಲಿ ಮುಂಬೈ ಓಟಕ್ಕೆ ಬ್ರೇಕ್  ಹಾಕುವುದೇ ಗುಜರಾತ್ ಟೈಟಾನ್ಸ್?:ಐಪಿಎಲ್‌ನಲ್ಲಿ ಮತ್ತೆ ಆಡಲು ರಬಾಡ ರೆಡಿ

ಮುಂಬೈ: ಸತತ 6 ಗೆಲುವಿನ ಕನಸಿನ ಓಟದಲ್ಲಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಭರ್ಜರಿ ಾರ್ಮ್‌ನಲ್ಲಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಗೆಲುವಿನ ವಿಸ್ತರಿಸುವ ತವಕದಲ್ಲಿದೆ. ಈ ಪಂದ್ಯ ಗುಜರಾತ್ ಬ್ಯಾಟರ್ಸ್‌ ಹಾಗೂ ಮುಂಬೈ ಬೌಲರ್ಸ್‌ ನಡುವಿನ ಪೈಪೋಟಿ ಎನಿಸಿದೆ.

ತವರಿನ ಅಂಗಣದಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಮುಂಬೈ ೇವರಿಟ್ ಎನಿಸಿದೆ. ಆದರೆ ಗುಜರಾತ್‌ನ ಅಗ್ರ ಮೂವರು ಬ್ಯಾಟರ್‌ಗಳಾದ ಸಾಯಿ ಸುದರ್ಶನ್ (504 ರನ್), ಶುಭಮಾನ್ ಗಿಲ್ (465) ಹಾಗೂ ಜೋಸ್ ಬಟ್ಲರ್ (470) ಅವರನ್ನು ಕಟ್ಟಿಹಾಕುವುದು ಮುಂಬೈಗೆ ಸವಾಲೆನಿಸಲಿದೆ. ಪ್ರತಿ ಪಂದ್ಯದಲ್ಲೂ ಈ ಮೂವರಲ್ಲಿ ಒಬ್ಬರು 50 ಪ್ಲಸ್ ರನ್‌ಗಳಿಸಿದ್ದಾರೆ. ಈ ಬಾರಿ ಟ್ರೆಂಟ್ ಬೌಲ್ಟ್ (16 ವಿಕೆಟ್), ಹಾರ್ದಿಕ್ ಪಾಂಡ್ಯ (13), ಜಸ್‌ಪ್ರೀತ್ ಬುಮ್ರಾ (11) ಹಾಗೂ ದೀಪಕ್ ಚಹರ್ (9) ದಾಳಿ ಎದುರು ಗುಜರಾತ್ ಬ್ಯಾಟರ್‌ಗಳಿಗೆ ನೈಜ ಸವಾಲು ಎದುರಾಗಲಿದೆ. ಮುಂಬೈ ಈ ಬಾರಿ ತವರು ಹಾಗೂ ಎದುರಾಳಿ ನೆಲದಲ್ಲಿ ಒಮ್ಮೆಯೂ 200 ಪ್ಲಸ್ ರನ್ ಬಿಟ್ಟುಕೊಟ್ಟಿಲ್ಲ. ಮೊದಲು ಬ್ಯಾಟಿಂಗ್‌ಗೆ ಇಳಿದು ಎದುರಾಳಿಗಳಿಗೆ ಬೃಹತ್ ಸವಾಲೊಡ್ಡುವುದು ಟೈಟಾನ್ಸ್ ಬಳಗದ ಗೆಲುವಿನ ಾರ್ಮುಲ ಎನಿಸಿದೆ.

ಜತೆಗೆ ಮುಂಬೈ ಎದುರು ಮೂರು ಬಾರಿಯೂ ಚೇಸಿಂಗ್‌ನಲ್ಲಿ ಗುಜರಾತ್ ಮೇಲುಗೈ ಸಾಧಿಸಿದೆ.

2022ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ, ಆರಂಭಿಕ ಸೋಲಿನಿಂದ ಪುಟಿದೇಳುವ ಮೂಲಕ ಪ್ಲೇಆ್ ರೇಸ್‌ನಲ್ಲಿ ಪ್ರಬಲ ತಂಡವೆನಿಸಿದೆ. ಹಾರ್ದಿಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಆಧಾರ ಎನಿಸಿದ್ದಾರೆ. ರೋಹಿತ್ ಶರ್ಮ (293 ರನ್), ರ‌್ಯಾನ್ ರಿಕೆಲ್‌ಟನ್ (334), ಸೂರ್ಯಕುಮಾರ್ (475) ಹಾಗೂ ತಿಲಕ್ ವರ್ಮ (239) ಬ್ಯಾಟಿಂಗ್‌ನಲ್ಲಿ ಬಲ ತುಂಬಲಿದ್ದಾರೆ. ಪರ್ಪಲ್ ಕ್ಯಾಪ್ ಹೊಂದಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ (19 ವಿಕೆಟ್), ಮೊಹಮದ್ ಸಿರಾಜ್ (14) ಹಾಗೂ ಸಾಯಿ ಕಿಶೋರ್ (12) ಗುಜರಾತ್‌ನ ಬೌಲಿಂಗ್ ಅಸ ಎನಿಸಿದ್ದಾರೆ.

ಪ್ಲೇಆಫ್ ಲೆಕ್ಕಾಚಾರ

ಗುಜರಾತ್ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವು, 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಮುಂಬೈ 11 ಪಂದ್ಯಗಳಲ್ಲಿ 7 ಜಯ, 4 ಸೋಲಿನೊಂದಿಗೆ 3ನೇ ಸ್ಥಾನದಲ್ಲಿದೆ. ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಳ್ಳಲು ಗುಜರಾತ್‌ಗೆ ಉಳಿದ 3ರಲ್ಲಿ 2 ಜಯ ಬೇಕಿದ್ದರೆ, ಮುಂಬೈಗೆ ಉಳಿದ 3ರಲ್ಲಿ 2 ಜಯ ಬೇಕಿದೆ. ಆದರೆ ಉಭಯ ತಂಡಗಳೂ ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳುವ ಅವಕಾಶವನ್ನು ಹೊಂದಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಗ್ರ 2ರೊಳಗಿನ ಸ್ಥಾನ ಪಡೆಯುವ ಅವಕಾಶವೂ ಹೆಚ್ಚಲಿದೆ. ಈ ಪಂದ್ಯ ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರುವ ಅವಕಾಶ ಹೊಂದಿದೆ.

ಮುಂಬೈ: ಟೂರ್ನಿಯಲ್ಲಿ ಅತ್ಯುತ್ತಮ ರನ್‌ರೇಟ್ ಹೊಂದಿರುವ ತಂಡ ಮುಂಬೈ (+1.274). ಸದ್ಯ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು, 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಳ್ಳಲು ಉಳಿದಿರುವ ಮೂರು ಪಂದ್ಯಗಳಲ್ಲಿ ಗೆಲ್ಲಬೇಕು. ಒಂದು ವೇಳೆ ಎರಡು ಗೆಲುವು ಸಾಧಿಸಿದರೂ, ರನ್‌ರೇಟ್ ನಿರ್ಣಾಯಕ ಪಾತ್ರವಹಿಸಲಿದೆ. ಗುಜರಾತ್ ವಿರುದ್ಧದ ಲಿತಾಂಶ ಅಗ್ರ 2ರಲ್ಲಿ ಸ್ಥಾನ ಪಡೆಯುವ ಅವಕಾಶ ವೃದ್ಧಿಸಲಿದೆ.ಒಂದು ವೇಳೆ ಮೂರು ಪಂದ್ಯಗಳಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದರೂ, ಇತರ ತಂಡಗಳಿಗಿಂತ ಉತ್ತಮ ರನರೇಟ್‌ನೊಂದಿಗೆ ಅರ್ಹತೆ ಪಡೆಯಬಹುದು. ಅಥವಾ ಪ್ಲೇಆ್ ರೇಸ್‌ನಿಂದ ಹೊರಬೀಳಲುಬಹುದು. ಏಕೆಂದರೆ ಇತರ ನಾಲ್ಕು ತಂಡಗಳು (ಆರ್‌ಸಿಬಿ, ಪಂಜಾಬ್, ಗುಜರಾತ್,ಡೆಲ್ಲಿ) ಮುಂಬೈಗಿಂತ ಹೆಚ್ಚಿನ ಅಂಕ ಕೆಲೆಹಾಕುವ ಅವಕಾಶ ಹೊಂದಿವೆ.

ಮುಖಾಮುಖಿ: 6

ಮುಂಬೈ: 2

ಗುಜರಾತ್: 4

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.

ಐಪಿಎಲ್‌ನಲ್ಲಿ ಮತ್ತೆ ಆಡಲು ರಬಾಡ ರೆಡಿ

ಮನರಂಜನಾ ಉದ್ದೀಪನ ಪ್ರಕರಣದಲ್ಲಿ ತಾತ್ಕಾಲಿಕ ಅಮಾನತುಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದ ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಗುಜರಾತ್ ಪರ ಮರಳಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಮಾದಕ ವ್ಯಸನ ಚಿಕಿತ್ಸಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ರಬಾಡ ಮೇಲಿನ ಅಮಾನತು ಶಿಕ್ಷೆ 1 ತಿಂಗಳಿಗೆ ತಗ್ಗಿದೆ. ಇದರಿಂದ ಮುಂಬೈ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗಿದ್ದಾರೆ.