ಕ್ರೀಡೆ

ಕ್ವಾಲಿಫೈಯರ್​-2 ಪಂದ್ಯದಲ್ಲಿ ಯಾರಿಗೆ ಫೈನಲ್ ಆಡುವ​ ಭಾಗ್ಯ? ಹೀಗಿದೆ ಪಿಚ್​ ವರದಿ! | PBKS vs MI Qualifier 2

PBKS vs MI Qualifier 2: ಐಪಿಎಲ್​ 18ನೇ ಆವೃತ್ತಿ ಇದೀಗ ಕೊನೆಯ ಘಟ್ಟ ತಲುಪಿದ್ದು, ಇಂದು (ಜೂನ್​.01) ಕ್ವಾಲಿಫೈಯರ್​-2 ಪಂದ್ಯ ನಡೆಯಲಿದೆ. ಪಂಜಾಬ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಜಿದ್ದಾಜಿದ್ದಿಯಲ್ಲಿ ಯಾವ ತಂಡ ಜಯಭೇರಿ ಆಗಲಿದೆಯೋ, ಆ ತಂಡ ಫೈನಲ್​ನಲ್ಲಿ ಆರ್​ಸಿಬಿ ಎದುರು ಐಪಿಎಲ್​ ಟ್ರೋಫಿಗಾಗಿ ಸೆಣಸಲಿದೆ.

ಇಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್​-2 ಪಂದ್ಯ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗೆದ್ದ ತಂಡ ಫೈನಲ್​ನಲ್ಲಿ ರಜತ್ ಪಟೀದಾರ್ ಪಡೆಯನ್ನು ಎದುರಿಸಲಿದೆ. ಅಸಲಿಗೆ ಆರ್​ಸಿಬಿ ಎದುರು ಪೈಪೋಟಿಗಿಳಿಯುವ ಬಲಿಷ್ಠ ತಂಡ ಯಾವುದು ಎಂಬುದೇ ಸದ್ಯ ಕ್ರಿಕೆಟ್​ ಪ್ರೇಮಿಗಳ ಕೌತುಕದ ಪ್ರಶ್ನೆ. ಈ ಸಂದರ್ಭದಲ್ಲಿ, ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಬೀಗಲು ಎದುರುನೋಡುತ್ತಿವೆ.

ಏನು ಹೇಳುತ್ತೆ ಪಿಚ್ ರಿಪೋರ್ಟ್​?

ಅಹಮದಾಬಾದ್ ಮೈದಾನ ಬ್ಯಾಟರ್‌ಗಳಿಗೆ ಉತ್ತಮ ಅವಕಾಶ. ಕಾರಣ, ಇದೊಂದು ಬ್ಯಾಟಿಂಗ್ ಪಿಚ್​ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳು 200ಕ್ಕೂ ಹೆಚ್ಚು ಸ್ಕೋರ್‌ಗಳನ್ನು ಗಳಿಸಿವೆ. ಔಟ್‌ಫೀಲ್ಡ್ ವೇಗವಾಗಿದೆ. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಹೆಡ್-ಟು-ಹೆಡ್ ದಾಖಲೆ

ಐಪಿಎಲ್ ಇತಿಹಾಸದಲ್ಲಿ, ಇಲ್ಲಿಯವರೆಗೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ 33 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ, ಪಂಜಾಬ್ 15 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 17 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ. ಇಂದಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಯಾರು ರೋಚಕ ಗೆಲುವು ಸಾಧಿಸಿ, ಫೈನಲ್​ಗೆ ಲಗ್ಗೆಯಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).