ಕ್ರೀಡೆ

ರಮಣದೀಪ್​ ಸಿಂಗ್​ ಸೂಪರ್ ಕ್ಯಾಚ್! ಬೆರಗಾದ ಶ್ರೇಯಸ್​ ಅಯ್ಯರ್​, ವಿಡಿಯೋ ವೈರಲ್​ | PBKS vs KKR

PBKS vs KKR: ಇಂದು (ಏ.15) ಪಂಜಾಬ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ ನೈಟ್​ ರೈಡರ್ಸ್​ ನಡುವಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಕಿಂಗ್ಸ್​, ಕೆಕೆಆರ್​ಗೆ ಬೌಲಿಂಗ್ ಮಾಡುವಂತೆ ತಿಳಿಸಿತು. 15.3 ಓವರ್​ಗೆ ಆಲ್​ಔಟ್ ಆದ ಪಂಜಾಬ್​, ಕೇವಲ 111 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿರುವ ಕೋಲ್ಕತ ಕೂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ತೀರ ಪರದಾಡುವ ಸ್ಥಿತಿ ತಲುಪಿದೆ.

ಮೊದಲು ಬ್ಯಾಟ್​ ಮಾಡಿದ ಪಂಜಾಬ್ ಕಿಂಗ್ಸ್​ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆ ನಂತರ ಕ್ರೀಸ್​ಗೆ ಬಂದ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್​ ಸ್ಫೋಟಕ ಇನ್ನಿಂಗ್ಸ್ ನೀಡುವಂತೆ ಕಂಡರು. ಆದರೆ, ಬೌಂಡರಿ ಹೊಡೆಯುವ ಭರದಲ್ಲಿ ರಮಣದೀಪ್ ಸಿಂಗ್​ಗೆ ಕ್ಯಾಚ್​ ನೀಡಿದರು. ಈ ಅದ್ಭುತ ಕ್ಯಾಚ್‌ನೊಂದಿಗೆ ಮಿಂಚಿದ ರಮಣದೀಪ್​, ಪಂಜಾಬ್ ಕಿಂಗ್ಸ್ ಕ್ಯಾಪ್ಟನ್​ಗೆ ಅಚ್ಚರಿ ಮೂಡಿಸಿದರು. ಈ ರೋಮಾಂಚಕ ಕ್ಯಾಚ್ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.

ಅಯ್ಯರ್ ಆಡಿದ ಶಾಟ್​ ನೇರವಾಗಿ ಡೀಪ್ ಪಾಯಿಂಟ್‌ನಲ್ಲಿದ್ದ ರಮಣದೀಪ್​ ಕೈಗೆ ಹೋಯಿತು. ತನ್ನ ಕಡೆ ಬಾಲ್​ ಬರುತ್ತಿದ್ದಂತೆ ಬಹಳ ವೇಗವಾಗಿ ಓಡಿಬಂದ ರಮಣದೀಪ್​, ಜಿಗಿದು ಅದ್ಭುತ ಕ್ಯಾಚ್ ಹಿಡಿದರು. ಇದು ಆಟದ ದಿಕ್ಕನ್ನೇ ಬದಲಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್​ಗೆ ಬೆವರಿಳಿಸಿದ ಕೆಕೆಆರ್​ ಬೌಲರ್​ಗಳು, 15.3 ಓವರ್‌ಗಳಲ್ಲಿ 111 ರನ್‌ ಗಳಿಸಿದ್ದ ಪಂಜಾಬ್​ ಪಡೆಯನ್ನು ಆಲೌಟ್ ಮಾಡಿತು.

ಪಂಜಾಬ್​ ಬ್ಯಾಟಿಂಗ್ ವಿವರ

ಪ್ರಭುಸಿಮ್ರನ್ ಸಿಂಗ್ (30)

ಪ್ರಿಯಾಂಶ್ ಆರ್ಯ (22)

ಶಶಾಂಕ್ ಸಿಂಗ್ (18)

ಶ್ರೇಯಸ್ ಅಯ್ಯರ್ (0)

ಗ್ಲೆನ್ ಮ್ಯಾಕ್ಸ್‌ವೆಲ್ (7)