ಹೊಸದಿಲ್ಲಿ: ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯ ಜತೆಗೆ ಐಸಿಸಿ 2023ರ ವರ್ಷದ ಪುರುಷರ ಕ್ರಿಕೆಟಿಗ ಪಟ್ಟವನ್ನು ಆಸ್ಟ್ರೇಲಿಯಾ ತಂಡವನ್ನು ನಾಯಕನಾಗಿ ಮುನ್ನಡೆಸಿ, ವಿಶ್ವಕಪ್ ಟ್ರೋಫಿ ಗೆಲ್ಲುವಂತೆ ಮಾಡಿದ ಪ್ಯಾಟ್ ಕಮಿನ್ಸ್ ಪಾಲಾಗಿದೆ. ಈ ವಿಷಯ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಸ್ಪೂರ್ತಿದಾಯಕ ನಾಯಕನಾಗಿ ಹೊರಹೊಮ್ಮಿದ ಪ್ಯಾಟ್ ಕುಮಿನ್ಸ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವುದರ ಜತೆಗೆ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಗೆಲುವು ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ದಾಖಲೆಯ ಗೆಲುವನ್ನು ಬರೆದರು. ಏಕದಿನ ವಿಶ್ವಕಪ್ನ ಆರನೇ ಬಾರಿಗೆ ಪಡೆಯುವ ಮುಖೇನ ಇತಿಹಾಸ ನಿರ್ಮಿಸಿದ ತಂಡಕ್ಕೆ ಕ್ರಿಕೆಟ್ ಫ್ಯಾನ್ಸ್ಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
2021ರಿಂದ ಪ್ಯಾಟ್ ಕಮ್ಮಿನ್ಸ್ ಅವರ ಉಪಸ್ಥಿತಿಯು ತಂಡದಲ್ಲಿ ಮತ್ತಷ್ಟು ಚೈತನ್ಯವನ್ನು ಹೆಚ್ಚಿಸಿದ್ದು, ಟೀಮ್ನ ಆಟದ ವೈಖರಿಯನ್ನು ಮಗದಷ್ಟು ಬಲಪಡಿಸಿದೆ. ಐಸಿಸಿ ವರ್ಷದ ಕ್ರಿಕೆಟಿಗ ಪಟ್ಟ ಪಡೆಯಲು ಸ್ಟಾರ್ ಕ್ರಿಕೆಟಿಗರಾದ ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿ ಈ ಗೌರವಾನ್ವಿತ ಪ್ರಶಸ್ತಿಯನ್ನು ಪ್ಯಾಟ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ,(ಏಜೆನ್ಸೀಸ್).