ಕ್ಯಾನ್‌ಬೆರಾ: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಗೆಲುವಿನ ಸವಿ ಕಂಡಿದೆ. ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ (92*ರನ್, 76 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ರವೀಂದ್ರ ಜಡೇಜಾ (66*ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್) ಸಾಹಸಿಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ಆಸೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 13 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿರುವ ಭಾರತ ತಂಡ ಟಿ20 ಸರಣಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಸತತ 5 ಸೋಲಿನ ಬಳಿಕ ಭಾರತ ತಂಡ ಮೊದಲ ಗೆಲುವು ದಾಖಲಿಸಿತು.
ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ನಿರೀಕ್ಷೆಯಂತೆಯೇ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಅವರ ನಿರ್ಧಾರವನ್ನು ಸಮರ್ಥಿಸುವಂಥ ಆಟ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳಿಂದ ಬರಲಿಲ್ಲ. ಆಗ ಜತೆಗೂಡಿದ ಪಾಂಡ್ಯ-ಜಡೇಜಾ ಜೋಡಿ ಮುರಿಯದ 6ನೇ ವಿಕೆಟ್‌ಗೆ 108 ಎಸೆತಗಳಲ್ಲಿ 150 ರನ್ ಪೇರಿಸಿತು. ಈ ಮೂಲಕ ಭಾರತ ತಂಡ 5 ವಿಕೆಟ್‌ಗೆ 302 ರನ್‌ಗಳ ಸವಾಲಿನ ಮೊತ್ತ ಪೇರಿಸುವಲ್ಲಿ ಸಫಲವಾಯಿತು. ಬಳಿಕ ಕಳೆದೆರಡು ಪಂದ್ಯಗಳಿಗಿಂತ ಸುಧಾರಿತ ಬೌಲಿಂಗ್ ನಿರ್ವಹಣೆ ತೋರಿದ ಭಾರತ ತಂಡ, ಆಸ್ಟ್ರೇಲಿಯಾವನ್ನು 49.3 ಓವರ್‌ಗಳಲ್ಲಿ 289 ರನ್‌ಗಳಿಗೆ ನಿಯಂತ್ರಿಸಿತು.
ಇನ್ನು 3 ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ ಕ್ಯಾನ್‌ಬೆರಾದಲ್ಲೇ ಚಾಲನೆ ಸಿಗಲಿದೆ.
ಭಾರತ: 5 ವಿಕೆಟ್‌ಗೆ 302 (ಧವನ್ 16, ಶುಭಮಾನ್ ಗಿಲ್ 33, ಕೊಹ್ಲಿ 63, ಶ್ರೇಯಸ್ ಅಯ್ಯರ್ 19, ಕೆಎಲ್ ರಾಹುಲ್ 5, ಹಾರ್ದಿಕ್ ಪಾಂಡ್ಯ 92*, ರವೀಂದ್ರ ಜಡೇಜಾ 66*, ಅಗರ್ 44ಕ್ಕೆ 2, ಅಬೋಟ್ 84ಕ್ಕೆ 1, ಹ್ಯಾಸಲ್‌ವುಡ್ 66ಕ್ಕೆ 1, ಜಂಪಾ 45ಕ್ಕೆ 1), ಆಸ್ಟ್ರೇಲಿಯಾ: 49.3 ಓವರ್‌ಗಳಲ್ಲಿ 289 (ಲಬುಶೇನ್ 7, ಫಿಂಚ್ 75, ಸ್ಮಿತ್ 7, ಹೆನ್ರಿಕ್ಸ್ 22, ಗ್ರೀನ್ 21, ಕ್ಯಾರಿ 38, ಮ್ಯಾಕ್ಸ್‌ವೆಲ್ 59, ಅಗರ್ 28, ಬುಮ್ರಾ 43ಕ್ಕೆ 2, ನಟರಾಜನ್ 70ಕ್ಕೆ 2, ಶಾರ್ದೂಲ್ 51ಕ್ಕೆ 3, ಜಡೇಜಾ 62ಕ್ಕೆ 1, ಕುಲದೀಪ್ 57ಕ್ಕೆ 1). ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ