ಕ್ರೀಡೆ

ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾ ಮಿರ್ಜಾ ವರಿಸಲು ಮುಂದಾಗಿದ್ದ ಪಾಕ್​ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​

ನವದೆಹಲಿ: ಭಾರತದ ಸ್ಟಾರ್​ ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಜತೆಗಿನ ವಿವಾಹ ವಿಚ್ಛೇದನದ ವಂದತಿಗಳಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​ ತೆರೆ ಎಳೆದಿದ್ದಾರೆ. ಪಾಕ್​ನ ಕಿರುತೆರೆ ನಟಿ ಸನಾ ಜಾವೇದ್​ ಅವರೊಂದಿಗೆ ಎರಡನೇ ವಿವಾಹವಾಗಿರುವ ಕ್ಷಣಗಳನ್ನು ಶೋಯಿಬ್​ ಮಲಿಕ್​ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಾನಿಯಾ ಮಿರ್ಜಾ ಜತೆಗಿನ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.

2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಶೋಯಿಬ್​ ಮಲಿಕ್​ ದಂಪತಿಗೆ 2018ರಲ್ಲಿ ಗಂಡು ಜನಿಸಿತ್ತು. 2022ರಿಂದಲೂ ಇವರಿಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿ ವಾಸಿಸುತ್ತಿದ್ದರು.ಅಂದಿನಿಂದ ಇವರಿಬ್ಬರ ನಡುವೆ ವಿಚ್ಛೇದನ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜತೆಗೆ ಇವರಿಬ್ಬರೂ ಕಳೆದ ಎರಡು ವರ್ಷಗಳಲ್ಲಿ ವಿರಳವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಕೆಲ ದಿನಗಳ ಹಿಂದಷ್ಟೇ ಮಲಿಕ್​ ಇನ್​ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ಅವರನ್ನು ಅನ್​ಫಾಲೋ ಮಾಡಿದ್ದರು. ಶೋಯಿಬ್​ ಮಲಿಕ್​ ವಿವಾಹದ ಬಗ್ಗೆ ಸಾನಿಯಾ ಮಿರ್ಜಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕೆಲವು ದಿನಗಳ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ಅರ್ಥ ಹೊಂದಿರುವ ಪೋಸ್ಟ್​ ಅನ್ನು ಸಾನಿಯಾ ಹಂಚಿಕೊಂಡಿದ್ದರು.

ಸನಾಗೂ 2ನೇ ವಿವಾಹ: ಪಾಕಿಸ್ತಾನದ ಹಲವು ಹಿಟ್​ ಧಾರಾವಾಹಿಗಳಲ್ಲಿ ನಟಿಸಿರುವ ಸನಾ ಜಾವೇದ್​, 2020ರಲ್ಲಿ ಗಾಯಕ ಉಮೈರ್​ ಜೈಸ್ವಾಲ್​ ಅವರನ್ನು ವಿವಾಹವಾಗಿದ್ದರು. ಎರಡು ತಿಂಗಳ ಹಿಂದೆ ಈ ಜೋಡಿ ವಿಚ್ಛೇದನದೊಂದಿಗೆ ಪರಸ್ಪರ ಬೇರ್ಪಟ್ಟಿದ್ದರು. ಶೋಯಿಬ್​ ಮಲಿಕ್​ ಜತಗಿನ ವಿವಾಹದ ಬಳಿಕ ಸನಾ ಸಾಮಾಜಿಕ ಜಾಲತಾಣದ ಬಯೋದಲ್ಲಿ ಸನಾ ಶೋಯಿಬ್​ ಮಲಿಕ್​ ಎಂದು ಬರೆದುಕೊಂಡಿದ್ದಾರೆ.

ಸಾನಿಯಾರಿಂದಲೇ ವಿಚ್ಛೇದನ: ಶೋಯಿಬ್​ ಮಲಿಕ್​ ಮೂರನೇ ಬಾರಿಗೆ ವಿವಾಹವಾಗಿದ್ದಾರೆ ಎಂಬ ಸುದ್ದಿ ವೈರಲ್​ ಆದ ಬಳಿಕ ಸಾನಿಯಾ ತಂದೆ

ನಿಯಾ ತಂದೆ ಇಮ್ರಾನ್​ ಮಿರ್ಜಾ ಪ್ರತಿಕ್ರಿಯಿಸಿದ್ದು, "ಖುಲಾ'ಎಂದು ಹೇಳುವ ಮೂಲಕ ಸಾನಿಯಾ ಮಿರ್ಜಾ, ಅವರ ಪತಿ(ಶೋಯಿಬ್​)ಗೆ ವಿಚ್ಛೇದನ ನೀಡಿದ್ದಾರೆ. ಕುರಾನ್​ ಪ್ರಕಾರ ಖುಲಾ ಎಂದರೆ "ಮುಸ್ಲಿಂ ಮಹಿಳೆಗೆ ಏಕಪಯವಾಗಿ ತನ್ನ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಸೂಚಿಸುತ್ತದೆ' ಎಂದು ಸ್ಪಷ್ಟಪಡಿಸಿದ್ದು, ಸಾನಿಯಾ ಮಿರ್ಜಾ ಅವರೇ ವಿಚ್ಛೇದನದ ನಿರ್ಧಾರ ತೆಗೆದುಕೊಂಡಿದ್ದಾರೆ. ಕುರಾನ್​ನಲ್ಲಿ ತಲಾಖ್​ ಮತ್ತು ಖುಲಾ ನಡುವೆ ವಿಭಿನ್ನ ವ್ಯತ್ಯಾಸಗಳಿದ್ದು, ಗಂಡ, ಹೆಂಡತಿಯೊಂದಿಗೆ ಸಂಬಂಧ ಕಳೆದುಕೊಳ್ಳಲು ಇಚ್ಛಿಸಿದರೆ ಅದನ್ನು ತಲಾಖ್​ ಎಂದು ಕರೆಯಲಾಗುತ್ತದೆ. ಆದರೆ ಪತ್ನಿಯೇ ಗಂಡನ ಜತೆಗೆ ಸಂಬಂಧ ತ್ಯಜಿಸಲು ಮುಂದಾದರೆ ಅದನ್ನು ಖುಲಾ ಎನ್ನಲಾಗುತ್ತದೆ.

ಶೋಯಿಬ್​ಗೆ 3ನೇ ಮದುವೆ ?: ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೊದಲು, ಆಯೇಶಾ ಸಿದ್ದಿಕಿ ಎಂಬ ಮಹಿಳೆ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್​ ಮಲಿಕ್​ ಈಗಾಗಲೇ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದರು. ಇದರೊಂದಿಗೆ ಶೋಯಿಬ್​ ಜೀವನ ಚರ್ಚೆಯ ಪ್ರಮುಖ ಅಂಶವಾಗಿ ನಂತರ ದೊಡ್ಡ ವಿವಾದವಾಯಿತು. 2002ರಲ್ಲಿ ತಾವು ವಿವಾಹವಾಗಿರುವುದಾಗಿ ವಿಡಿಯೊ ತುಣುಕುಗಳನ್ನು ಹಂಚಿಕೊಂಡ ಆಯೇಷಾ, ನಂತರ ಶೋಯಿಬ್​ ವಿರುದ್ಧ ಪೊಲೀಸ್​ಗೆ ದೂರು ನೀಡಿ, ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾಳನ್ನು ಮದುವೆಯಾಗಲು ಹೊರಟಿದ್ದಾರೆ ಎಂದು ಆರೋಪಿಸಿದರು. ಆರಂಭದಲ್ಲಿ ಆರೋಪವನ್ನು ನಿರಾಕರಿಸುತ್ತಲೇ ಇದ್ದ ಶೋಯಿಬ್​ ಮಲಿಕ್​

ಏಪ್ರಿಲ್​ 2010ರಲ್ಲಿ ಸಾನಿಯಾ ಅವರನ್ನು ಮದುವೆಯಾಗುವ ಕೆಲವು ದಿನಗಳ ಮುನ್ನ ಮೊದಲ ಪತ್ನಿ ಆಯೇಶಾ ಸಿದ್ದಿಕ್​ ಅವರಿಂದ ವಿಚ್ಛೇದನ ಪಡೆದರು ಎನ್ನಲಾಗಿದೆ. ಸಾನಿಯಾ ಮಿರ್ಜಾ ಅವರು ಶೋಯಿಬ್​ ಮಲಿಕ್​ ಅವರನ್ನು ಮದುವೆಯಾಗುವ ಮೊದಲು ಬಾಲ್ಯದ ಸ್ನೇಹಿತ ಸೊಹ್ರಾಬ್​ ಮಿರ್ಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.