ಸಂಜು ಐ ಲವ್​ಯೂ...  
ಕ್ರೀಡೆ

ಸಂಜು ಐ ಲವ್​ಯೂ... ಪಾಕಿಸ್ತಾನಿ ಅಭಿಮಾನಿಯ ಮಾತಿಗೆ ಸ್ಯಾಮ್ಸನ್ ಕೊಟ್ಟ ರಿಯಾಕ್ಷನ್​ ವಿಡಿಯೋ ವೈರಲ್​ | Sanju Samson ​

ಸ್ಟೇಡಿಯಂನಲ್ಲಿದ್ದ ಅಭಿಮಾನಿಯೊಬ್ಬರು ಮೊದಲು ಇಶಾನ್​ ಕಿಶನ್​ ಹೆಸರನ್ನು ಕೂಗಿದರು. ಆದರೆ, ಇದಕ್ಕೆ ಕಿಶನ್​ ಕ್ಯಾರೇ ಎನ್ನಲಿಲ್ಲ. ಅವರ ನಂತರದಲ್ಲಿ, ಅಲ್ಲೇ ಇದ್ದ ಸ್ಯಾಮ್ಸನ್​ಗೆ, ನಾನು ಪಾಕಿಸ್ತಾನಿ, ಐ ಲವ್​ ಯೂ ಸಂಜು ಎಂದು ಕೂಗಿದ್ದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.

ಸಾನೋ: ಇತ್ತೀಚೆಗಷ್ಟೇ ಜಪಾನ್​ ವಿರುದ್ಧದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಟೀಮ್ ಇಂಡಿಯಾ, ಕೊನೆಯ ಹಂತದಲ್ಲಿ ರೋಚಕ ಜಯ ಸಾಧಿಸಿದ್ದು ಬಹುತೇಕ ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತೇ ಇದೆ. ಆದರೆ, ಈ ಮಧ್ಯೆ ಮೈದಾನದಲ್ಲಿ ನಡೆದ ಒಂದು ಘಟನೆಯ ದೃಶ್ಯವಂತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ವೈರಲ್ ಆಗಿದೆ.

ಟೀಮ್ ಇಂಡಿಯಾದ ಬ್ಯಾಟಿಂಗ್​ ವೇಳೆ ಅದಾಗಲೇ ಔಟ್​ ಆಗಿ ಪೆವಿಲಿಯನ್​ ಸೇರಿದ್ದ ತಂಡದ ಆಟಗಾರರ ಪೈಕಿ ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​ ಮೈದಾನದ ಡಗೌಟ್‌ನಲ್ಲಿ ಕುಳಿತಿದ್ದರು. ಈ ವೇಳೆ, ಸ್ಟೇಡಿಯಂನಲ್ಲಿದ್ದ ಅಭಿಮಾನಿಯೊಬ್ಬರು ಮೊದಲು ಇಶಾನ್​ ಕಿಶನ್​ ಹೆಸರನ್ನು ಕೂಗಿದರು. ಆದರೆ, ಇದಕ್ಕೆ ಕಿಶನ್​ ಕ್ಯಾರೇ ಎನ್ನಲಿಲ್ಲ. ಅವರ ನಂತರದಲ್ಲಿ, ಅಲ್ಲೇ ಇದ್ದ ಸ್ಯಾಮ್ಸನ್​ಗೆ, ನಾನು ಪಾಕಿಸ್ತಾನಿ, ಐ ಲವ್​ ಯೂ ಸಂಜು ಎಂದು ಕೂಗಿದ್ದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.

ಸಂಜು ನೀವು ಅಭಿಷೇಕ್‌ರನ್ನು ಒಮ್ಮೆ ಕರೆಯಬಹುದಾ? ಎಂದು ಪಾಕ್​ ಅಭಿಮಾನಿ ಕೇಳಿದಕ್ಕೆ ಇಶಾನ್​ ರೀತಿ ಸುಮ್ಮನಾಗದ ಸಂಜು, ಅಭಿಷೇಕ್ ಶರ್ಮಾ ಈಗ ಊಟ ಮಾಡುತ್ತಿದ್ದಾರೆ. ಪಂದ್ಯ ಈಗಷ್ಟೇ ಮುಗಿದಿದೆ. ನಮಗೂ ಸ್ವಲ್ಪ ಸಮಯ ಕೊಡಿ ಎಂದರು. ಇದಾದ ಬಳಿಕ ಒಂದು ಜಾಗದ ಕಡೆ ಕೈತೋರಿದ ಸ್ಯಾಮ್ಸನ್​, ಅಲ್ಲಿಯೇ ನಿಮ್ಮನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು. ಇದಕ್ಕೆ ಓಕೆ ಎಂದ ಫ್ಯಾನ್​​, ಕಾಯುವುದಾಗಿಯೂ ಹೇಳಿದರು. ಪಾಕಿಸ್ತಾನಿ ಅಭಿಮಾನಿ ಮತ್ತು ಸಂಜು ರಿಯಾಕ್ಷನ್​ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಕ್ರಿಕೆಟ್​ ಪ್ರಿಯರ ಗಮನ ಸೆಳೆಯುತ್ತಿದೆ,(ಏಜೆನ್ಸೀಸ್).