ಕ್ರೀಡೆ

ಹಿಂದು ಯುವತಿ ಜತೆ ಪಾಕ್​ ಕ್ರಿಕೆಟಿಗನ ನಿಶ್ಚಿತಾರ್ಥ! ಮದ್ವೆಗೂ ಮುನ್ನವೇ ಶಾಕಿಂಗ್​ ಹೇಳಿಕೆ ಕೊಟ್ಟ ರಾಜಾ ಹಸನ್ | Raza Hassan

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​ ನಂತರ ಮತ್ತೊಬ್ಬ ಪಾಕ್​ ಕ್ರಿಕೆಟರ್​ ಭಾರತೀಯ ಮಹಿಳೆ ( Indian Woman ) ಯನ್ನು ಮದುವೆಯಾಗಲು ರೆಡೆಯಾಗಿದ್ದಾರೆ.

ಪಾಕಿಸ್ತಾನದ ಎಡಗೈ ಸ್ಪಿನ್ನರ್​ ರಾಜಾ ಹಸನ್ ( Raza Hassan ) ಭಾರತೀಯ ಮೂಲದ ಯುವತಿಯನ್ನು ವರಿಸುತ್ತಿದ್ದು​, ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನಾನು ಮದುವೆಯಾಗುವ ಯುವತಿ, ಹಿಂದು ( Hindu) ಆಗಿದ್ದು, ಆಕೆ ಮದುವೆ ಮುನ್ನವೇ ಇಸ್ಲಾಂ ( Islam ) ಧರ್ಮಕ್ಕೆ ಮತಾಂತರವಾಗಲಿದ್ದಾಳೆ ಎಂದು ರಾಜಾ ಹಸನ್ ( Raza Hassan )​ ಪಾಕ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ರಾಜಾ ಹಸನ್​ ಮದುವೆಯಾಗುತ್ತಿರುವ ವಧುವಿನ ಹೆಸರು ಪೂಜಾ ಬೊಮನ್​. ಈಕೆಗೆ 32 ವರ್ಷ ವಯಸ್ಸು. ಅಮೆರಿಕದ ಶಾಶ್ವತ ನಿವಾಸಿ. ಮೂಲಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಮದುವೆ ಸಮಾರಂಭ ನಡೆಯಲಿದೆ. 32 ವರ್ಷದ ರಾಜಾ ಹಸನ್​ ಪಾಕಿಸ್ತಾನವನ್ನು ತೊರೆದಿದ್ದು, ಸದ್ಯ ಅಮೆರಿಕದಲ್ಲಿ ವಾಸವಿದ್ದಾರೆ.

ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ! ನನ್ನ ಜೀವನದ ಪ್ರೀತಿ ಎಂದೆಂದಿಗೂ ನನ್ನದಾಗಲಿ ಎಂದು ನಾನು ಕೇಳಿದೆ, ಅದಕ್ಕೆ ಅವಳು ಹೌದು ಎಂದಳು. ಮುಂದಿನ ಸಾಹಸಮಯ ಜೀವನವನ್ನು ಒಟ್ಟಿಗೆ ಎದುರಿಸಲು ಉತ್ಸುಕರಾಗಿದ್ದೇವೆ ಎಂದು ರಾಜಾ ಹಸನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಪೂಜಾ ಬೊಮನ್​ ಜತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)