ಪಿಂಕ್​ ಜೆರ್ಸಿಯಲ್ಲಿ ಪಾಕಿಸ್ತಾನ ತಂಡ  ಎಐ ಚಿತ್ರ
ಕ್ರೀಡೆ

ಅಕ್ಟೋಬರ್​ 25ಕ್ಕೆ ಪಿಂಕ್​ ಜೆರ್ಸಿಯಲ್ಲಿ ಆಡಲಿದೆ ಪಾಕಿಸ್ತಾನ! ಹೀಗಿದೆ ಕಾರಣ...

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಣ್ಣದ ಸಮವಸ್ತ್ರ ಆರಂಭಗೊಂಡ ಬಳಿಕ ಪಾಕಿಸ್ತಾನ ತಂಡ ಬರೀ ಹಸಿರು ಜೆರ್ಸಿಯಲ್ಲೇ ಆಡುತ್ತ ಬಂದಿದೆ

ಲಾಹೋರ್​: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಣ್ಣದ ಸಮವಸ್ತ್ರ ಆರಂಭಗೊಂಡ ಬಳಿಕ ಪಾಕಿಸ್ತಾನ ತಂಡ ಬರೀ ಹಸಿರು ಜೆರ್ಸಿಯಲ್ಲೇ ಆಡುತ್ತ ಬಂದಿದೆ. ಇದೀಗ ಪಾಕಿಸ್ತಾನ ತಂಡ ಮೊದಲ ಬಾರಿಗೆ ತನ್ನ ಜೆರ್ಸಿ ಬಣ್ಣ ಬದಲಾಯಿಸಲು ಮುಂದಾಗಿದೆ!

ಹಾಲಿ ತ್ರಿಕೋನ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡ ಅಕ್ಟೋಬರ್​ 25ರಂದು ಇಂಗ್ಲೆಂಡ್​ ವಿರುದ್ಧ ಲಾಹೋರ್​ನಲ್ಲಿ ಆಡಲಾಗುವ ಅಹರ್ನಿಶಿ ಪಂದ್ಯದಲ್ಲಿ ಪಾಕ್​ ತಂಡ ನಸುಗೆಂಪು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸ್ತನ ಕ್ಯಾನ್ಸರ್​ ಜಾಗೃತಿಗಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಈ ವಿಶೇಷ ಕ್ರಮವನ್ನು ತೆಗೆದುಕೊಂಡಿದೆ.

ಜಾಗತಿಕವಾಗಿ ಅಕ್ಟೋಬರ್​ ತಿಂಗಳನ್ನು ಸ್ತನ ಕ್ಯಾನ್ಸರ್​ ಜಾಗೃತಿ ಮೂಡಿಸಲಾಗುತ್ತದೆ. ಹೀಗಾಗಿ ಪಂದ್ಯದ ವೇಳೆ ಪಾಕ್​ ತಂಡ ಪಿಂಕ್​ ಜೆರ್ಸಿ ಧರಿಸುವುದು ಮಾತ್ರವಲ್ಲದೆ, ಗದ್ದಾಫಿ ಸ್ಟೇಡಿಯಂ ಕೂಡ ಬಹುತೇಕ ಇದೇ ಬಣ್ಣದಿಂದ ಕಂಗೊಳಿಸಲಿದೆ. ಪಂದ್ಯಕ್ಕೆ ಬಳಸಲಾಗುವ ವಿಕೆಟ್​ ಕೂಡ ಪಿಂಕ್​ ಬಣ್ಣದ್ದಾಗಿರಲಿದೆ ಎಂದು ಪಿಸಿಬಿ ತಿಳಿಸಿದೆ.