ಕ್ರೀಡೆ

19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕ್‌ಗೆ ಶರಣಾದ ಭಾರತ ಕಿರಿಯರ ತಂಡ

ದುಬೈ: ಆದರ್ಶ್ ಸಿಂಗ್ (62) ನಾಯಕ ಉದಯ್ ಸಹರಾನ್ (60) ಅವಳಿ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು 8 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಬ್ಯಾಟರ್ ಅಜಾನ್ ಅವೈಸ್ (105* ರನ್, 130 ಎಸೆತ, 10 ಬೌಂಡರಿ) ಶತಕದ ಬಲದಿಂದ ಪಾಕ್ ಸತತ 2ನೇ ಗೆಲುವು ದಾಖಲಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 9 ವಿಕೆಟ್‌ಗೆ 259 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಅಜಾನ್ ಅವೈಸ್ ಹಾಗೂ ನಾಯಕ ಸಾದ್ ಬೇಗ್ (68*) ಜತೆಯಾಟದ ಬಲದಿಂದ ಪಾಕ್, 47 ಓವರ್‌ಗಳಲ್ಲಿ 2 ವಿಕೆಟ್‌ಗೆ 263 ರನ್ ಸಿಡಿಸಿ ಜಯದ ಸಂಭ್ರಮ ಕಂಡಿತು.

ಭಾರತ: 9 ವಿಕೆಟ್‌ಗೆ 259 (ಆದರ್ಶ್ 62, ಅರ್ಶಿನ್ 24, ಉದಯ್ 60, ಸಚಿನ್ ದಾಸ್ 58, ಜೀಶಾನ್ 46ಕ್ಕೆ4, ಉಬೇದ್ 49ಕ್ಕೆ2).

ಪಾಕ್: 47 ಓವರ್‌ಗಳಲ್ಲಿ 2 ವಿಕೆಟ್‌ಗೆ 263 (ಶಾಮಿಲ್ 8, ಶಹಜೈಬ್ 63, ಅಜಾನ್ 105*, ಸಾದ್ 68*, ಮುರುಗನ್ 55ಕ್ಕೆ2).

ಭಾರತಕ್ಕೆ ಮುಂದಿನ ಪಂದ್ಯ

ಎದುರಾಳಿ:ನೇಪಾಳ

ಯಾವಾಗ: ಡಿ.12, ಮಂಗಳವಾರ

ಆರಂಭ: ಬೆಳಗ್ಗೆ 11.00