ತ್ರಿಕೋನ ಸರಣಿಯ ಪ್ರಶಸ್ತಿಯೊಂದಿಗೆ ಪಾಕಿಸ್ತಾನ ತಂಡ ಏಜೆನ್ಸಿ
ಕ್ರೀಡೆ

ಭಾರತದ 'ಫೈನಲ್​' ದಾಖಲೆ ಸರಿಗಟ್ಟಿದ ಪಾಕಿಸ್ತಾನ!

ಭಾರತ ತಂಡ 2002ರ ನಾಟ್​ವೆಸ್ಟ್​ ತ್ರಿಕೋನ ಸರಣಿಯ ಫೈನಲ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ನೀಡಿದ 226 ರನ್​ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಲಾಹೋರ್​: ಏಕದಿನ ಕ್ರಿಕೆಟ್​ ಟೂರ್ನಿಯೊಂದರ ಫೈನಲ್​ ಪಂದ್ಯದಲ್ಲಿ ಗರಿಷ್ಠ ಮೊತ್ತವನ್ನು ಬೆನ್ನಟ್ಟಿ ಗೆದ್ದ ಭಾರತದ ವಿಶ್ವದಾಖಲೆಯನ್ನು ಪಾಕಿಸ್ತಾನ ತಂಡ ಸರಿಗಟ್ಟಿದೆ.

ಇಂಗ್ಲೆಂಡ್​ ತಂಡವನ್ನು ಒಳಗೊಂಡ ತವರಿನ ತ್ರಿಕೋನ ಏಕದಿನ ಸರಣಿಯ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ನೀಡಿದ 326 ರನ್​ ಸವಾಲನ್ನು 48.3 ಓವರ್​ಗಳಲ್ಲಿ 7 ವಿಕೆಟ್​ ನಷ್ಟದಲ್ಲಿ ಬೆನ್ನಟ್ಟಿ ಗೆದ್ದಿತು. ಈ ಮುನ್ನ ಭಾರತ ತಂಡ 2002ರ ನಾಟ್​ವೆಸ್ಟ್​ ತ್ರಿಕೋನ ಸರಣಿಯ ಫೈನಲ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ನೀಡಿದ 226 ರನ್​ ಸವಾಲನ್ನು ಯುವರಾಜ್​ ಸಿಂಗ್​-ಮೊಹಮದ್​ ಕೈಫ್​ ಜೋಡಿಯ ಸಾಹಸದಿಂದ ಯಶಸ್ವಿಯಾಗಿ ಬೆನ್ನಟ್ಟಿತ್ತು.

331 ರನ್​ ಕಲೆಹಾಕಿದ ಪಾಕ್​, ಏಕದಿನ ಟೂರ್ನಿಯ ಫೈನಲ್​ನಲ್ಲಿ ಚೇಸಿಂಗ್​ ವೇಳೆ ಗರಿಷ್ಠ ರನ್​ ಗಳಿಸಿದ ದಾಖಲೆಯನ್ನೂ ಬರೆಯಿತು. ಆರಂಭಿಕ ಫಖರ್​ ಜಮಾನ್​ (127) ಶತಕ ಸಿಡಿಸಿ ಪಾಕ್​ ಗೆಲುವಿಗೆ ನೆರವಾದರು.