ಲಾಹೋರ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಲಾಗಿದ್ದು, ಏಷ್ಯಾಕಪ್ ಟೂರ್ನಿಯಲ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದ ವೇಗಿ ನಸೀಮ್ ಷಾ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಬದಲಿ ಆಟಗಾರನಾಗಿ ಮಧ್ಯಮ ವೇಗಿ ಹಸನ್ ಅಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಏಷ್ಯಾಕಪ್‌ನಲ್ಲಿ ಆಡಿದ ತಂಡದ ಬಹುತೇಕ ಆಟಗಾರರು ಕಣಕ್ಕಿಳಿಯಲಿದ್ದಾರೆ. ಹಸನ್ ಅಲಿ 2022ರ ಜೂನ್‌ನಲ್ಲಿ ಪಾಕ್ ಪರ ಕೊನೆಯದಾಗಿ ಆಡಿದ್ದರು.
ಏಷ್ಯಾಕಪ್ ಟೂರ್ನಿಯ ಸೂಪರ್-4ನ ಭಾರತ ವಿರುದ್ಧ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾಗಿರುವ ನಸೀಮ್ ಷಾಗೆ ಶಸ ಚಿಕಿತ್ಸೆ ಅಗತ್ಯವಿದ್ದು, ಮುಂದಿನ 3-4 ತಿಂಗಳು ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ ಎಂದು ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.
ತಂಡ: ಬಾಬರ್ ಅಜಮ್ (ನಾಯಕ), ಶಾದಬ್ ಖಾನ್ (ಉಪನಾಯಕ), ಮೊಹಮದ್ ರಿಜ್ವಾನ್ (ವಿ.ಕೀ), ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಖರ್ ಜಮಾನ್, ಹ್ಯಾರಿಸ್ ರ್ೌ, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಮೊಹಮದ್ ನವಾಜ್, ಮೊಹಮದ್ ವಸೀಂ ಜೂ., ಅಘಾ ಸಲ್ಮಾನ್, ಶಹೀನ್ ಷಾ ಅಫ್ರಿದಿ, ಒಸ್ಮನ್ ಮಿರ್. ಮೀಸಲು: ಮೊಹಮದ್ ಹ್ಯಾರಿಸ್, ಅಬ್ರರ್ ಅಹ್ಮದ್, ಜಮಾನ್ ಖಾನ್.