ಕ್ರೀಡೆ

ಶ್ರೀಲಂಕಾಗೆ ಸವಾಲಿನ ಗುರಿ ನೀಡಿದ ಪಾಕ್: ಮೊಹಮದ್ ರಿಜ್ವಾನ್ ಸಮಯೋಚಿತ ಬ್ಯಾಟಿಂಗ್

ಕೊಲಂಬೊ: ವಿಕೆಟ್ ಕೀಪರ್- ಬ್ಯಾಟರ್ ಮೊಹಮದ್ ರಿಜ್ವಾನ್ (86*ರನ್, 73 ಎಸೆತ, 6 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಮಳೆಬಾಧಿತ ಏಷ್ಯಾಕಪ್ ಏಕದಿನ ಟೂರ್ನಿಯ ನಿರ್ಣಾಯಕ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೌರವಯುತ ಮೊತ್ತ ದಾಖಲಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ೈನಲ್‌ಗೇರಲಿದೆ. ಮಳೆ ಆಡಚಣೆಯಿಂದಾಗಿ ರದ್ದುಗೊಂಡರೆ ಲಂಕಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲಿದೆ.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಾಕೌಟ್ ಮಾದರಿಯ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಅಜಮ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಅಬ್ದುಲ್ಲಾ ಶಫೀಕ್ (52) ಹಾಗೂ ರಿಜ್ವಾನ್- ಇಫ್ತಿಕರ್ ಅಹ್ಮದ್ (47) ಜತೆಯಾಟದ ನೆರವಿನಿಂದ ಪಾಕಿಸ್ತಾನ 42 ಓವರ್‌ಗಳಲ್ಲಿ 7 ವಿಕೆಟ್‌ಗೆ 252 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಡಕ್ವರ್ತ್-ಲೂಯಿಸ್ ನಿಯಮದನ್ವಯ ಲಂಕಾ 42 ಓವರ್‌ಗಳಲ್ಲಿ 253ಕ್ಕೆ ಬದಲಾಗಿ 252 ರನ್ ಗಳಿಸಿದರೂ ಗೆಲ್ಲಬಹುದಾಗಿದೆ.

ಪಂದ್ಯ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಆರಂಭಗೊಂಡಿದ್ದರಿಂದ ಮೊದಲು 45 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಬಳಿಕ ಪಾಕ್ 27.4 ಓವರ್‌ಗಳಲ್ಲಿ 5 ವಿಕೆಟ್‌ಗೆ 130 ರನ್‌ಗಳಿಸಿದಾಗ ಮತ್ತೆ ಮಳೆ ಅಡಚಣೆ ತಂದ ಕಾರಣ ಓವರ್ ಸಂಖ್ಯೆಯನ್ನು 42ಕ್ಕೆ ಇಳಿಸಲಾಯಿತು.

ಲಂಕಾ ಆರಂಭಿಕ ಮೇಲುಗೈ: ಪಾಕ್ ಪರ ಇನಿಂಗ್ಸ್ ಆರಂಭಿಸಿದ ಖರ್ ಜಮಾನ್ (4) ಬೇಗನೆ ನಿರ್ಗಮಿಸಿದರು. ಬಳಿಕ ಬಾಬರ್ ಅಜಮ್ (29) ಹಾಗೂ ಅಬ್ದುಲ್ಲಾ ಶಫೀಕ್ ಎರಡನೇ ವಿಕೆಟ್‌ಗೆ 64 ರನ್ ಪೇರಿಸಿ ತಂಡವನ್ನು ಆಧರಿಸಿದರು. ಆರನೇ ವಿಕೆಟ್‌ಗೆ ಜತೆಯಾದ ರಿಜ್ವಾನ್ ಹಾಗೂ ಇಫ್ತಿಕರ್ 78 ಎಸೆತಗಳಲ್ಲಿ 108 ರನ್ ಬಾರಿಸಿ ಮೊತ್ತ ಹಿಗ್ಗಿಸಿದರು. ಮಳೆ ಅಡಚಣೆ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ರಿಜ್ವಾನ್ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಜೇಯವಾಗಿ ಉಳಿದರು. ಕೊನೇ 10 ಓವರ್‌ಗಳಲ್ಲಿ ಪಾಕ್ 102 ರನ್ ದೋಚಿತು.

ಪಾಕಿಸ್ತಾನ: 42 ಓವರ್‌ಗಳಲ್ಲಿ 7 ವಿಕೆಟ್‌ಗೆ 252 (ಶಫೀಕ್ 52, ಬಾಬರ್ 29, ರಿಜ್ವಾನ್ 86*, ನವಾಜ್ 12, ಇಫ್ತಿಕರ್ 47, ಪಥಿರಣ 65ಕ್ಕೆ3, ಪ್ರಮೋದ್ 58ಕ್ಕೆ 2).

ಐವರ ಬದಲಾವಣೆ ೈನಲ್ ಅರ್ಹತೆ ಪಡೆಯಲು ಜಯದ ಒತ್ತಡದಲ್ಲಿರುವ ಪಾಕಿಸ್ತಾನ ಐದು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ವೇಗಿ ನಸೀಮ್ ಷಾ, ಹ್ಯಾರಿಸ್ ರ್ೌ ಗಾಯದ ಸಮಸ್ಯೆಯಿಂದ ಹೊರಗುಳಿದರೆ, ಇಮಾಮ್ ಉಲ್ ಹಕ್, ಹೀಮ್ ಆಶ್ರ್, ಅಘಾ ಸಲ್ಮಾನ್ ಬದಲಿಗೆ ಅಬ್ದುಲ್ಲಾ ಶಫೀಕ್, ಮೊಹಮದ್ ಹ್ಯಾರಿಸ್, ನವಾಜ್ , ಜೂ,ವಾಸೀಂ ಹಾಗೂ ಜಮಾನ್ ಖಾನ್ ಅವಕಾಶ ಪಡೆದರು.